ಕರ್ನಾಟಕ

karnataka

ETV Bharat / sitara

ಭೋಪಾಲ್​ನಲ್ಲಿ ಟಿಕೆಟ್​​ ವಾರ್​: ಚಪಾಕ್ ​V/S ತಾನಾಜಿ - ಭೂಪಾಲ್​ನಲ್ಲಿ ಟಿಕೆಟ್​​ ವಾರ್​

ದೀಪಿಕಾ ಪಡುಕೋಣೆ ಅಭಿನಯದ ಚಪಾಕ್​ ಸಿನಿಮಾ ಬಿಡುಗಡೆ​ ಆಗಿದೆ. ಇನ್ನು ಈ ಸಿನಿಮಾದಿಂದ ಕೆಲವು ವಿವಾದಗಳು ಕೂಡ ಸೃಷ್ಟಿಯಾಗಿದ್ದು ಚಿತ್ರದಲ್ಲಿ ಹಿಂದು ಧರ್ಮಕ್ಕೆ ಧಕ್ಕೆಯಾಗಿದೆ ಎಂದು ಜಿಜೆಪಿ ಆಕ್ಷೇಪ ಎತ್ತಿದೆ. ಭೋಪಾಲ್​ನಲ್ಲಿ ಬಿಜೆಪಿ ಕಾರ್ಯಕರ್ತರು ತಾನಾಜಿ ಸಿನಿಮಾದ ಟಿಕೆಟ್​​ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

BJP workers distribute free tickets to Tanhaji movie
ಭೂಪಾಲ್​ನಲ್ಲಿ ಟಿಕೆಟ್​​ ವಾರ್​ : ಚಪಾಕ್ ​V/S ತಾನಾಜಿ

By

Published : Jan 10, 2020, 2:47 PM IST

ಇಂದು ದೇಶಾದ್ಯಂತ ದೀಪಿಕಾ ಪಡುಕೋಣೆ ಅಭಿನಯದ ಚಪಾಕ್​ ಸಿನಿಮಾ ರಿಲೀಸ್​ ಆಗಿದೆ. ಈ ಸಿನಿಮಾದಿಂದ ಕೆಲವು ವಿವಾದಗಳು ಕೂಡ ಸೃಷ್ಟಿಯಾಗಿದ್ದು, ಚಿತ್ರದಲ್ಲಿ ಹಿಂದು ಧರ್ಮಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಜಿಜೆಪಿ ಆಕ್ಷೇಪ ಎತ್ತಿದೆ.

ಭೋಪಾಲ್​ನಲ್ಲಿ ಟಿಕೆಟ್​​ ವಾರ್​ : ಚಪಾಕ್ ​V/S ತಾನಾಜಿ

ದೀಪಿಕಾ ಪಡುಕೋಣೆ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಬೆಂಬಲು ನೀಡಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಮಧ್ಯಪ್ರದೇಶದ ಭೋಪಾಲ್​​ನಲ್ಲಿ​​ ಚಪಾಕ್​ ಸಿನಿಮಾವನ್ನು ವಿರೋಧಿಸುತ್ತಿದ್ದಾರೆ. ಇನ್ನು, ದೀಪಿಕಾ ಮೇಲಿನ ಆಕ್ರೋಶಕ್ಕೆ ಭೋಪಾಲ್​ನ ಬಿಜೆಪಿ ಕಾರ್ಯಕರ್ತರು ತಾನಾಜಿ ಸಿನಿಮಾದ ಟಿಕೆಟ್​​ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

ಇತ್ತ ಭೋಪಾಲ್​​ನ NSUI ಚಪಾಕ್​ ಸಿನಿಮಾ ಪರ ನಿಂತಿದ್ದು, ಚಪಾಕ್​ ಸಿನಿಮಾ ನೋಡಲು ಬರುವವರಿಗೆ ಉಚಿತವಾಗಿ ಟಿಕೆಟ್​ಗಳನ್ನು ನೀಡುತ್ತಿದೆ. ಒಟ್ಟಾರೆಯಾಗಿ ಭೋಪಾಲ್​ನಲ್ಲಿ ಸಿನಿಮಾ ಟಿಕೆಟ್​​ ವಾರ್​ ಶುರುವಾಗಿದೆ. ಹಲವು ಸಂಘಟನೆಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ.

ABOUT THE AUTHOR

...view details