ಕರ್ನಾಟಕ

karnataka

ETV Bharat / sitara

'ಬಿಸಿ ಬೇಳೆ ಬಾತ್'​ ತಿನ್ನಿಸಿದ ಕಮಲಿ ಧಾರಾವಾಹಿ ನಿರ್ದೇಶಕ! - kannada short movie bisibele bath

ಕಮಲಿ ಧಾರಾವಾಹಿಯನ್ನು ನಿರ್ದೇಶಿಸಿದ ಅರವಿಂದ ಕೌಶಿಕ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಅದಕ್ಕೆ ಕಾರಣ ಅವರು ನಿರ್ದೇಶಿಸಿದ ಈ ಕಿರುಚಿತ್ರ. ನವೆಂಬರ್ 4ರಂದು ಯೂಟ್ಯೂಬ್​​ನಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರದ ಹೆಸರು ಬಿಸಿ ಬೇಳೆ ಬಾತ್.

'ಬಿಸಿಬೇಳೆ ಬಾತ್' ಕಿರುಚಿತ್ರ

By

Published : Nov 7, 2019, 10:46 AM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಗೆ ಹೆಂಗೆಳೆಯರು ಮನ ಸೋತಿದ್ದಾರೆ. ಮುಗ್ಧ ಹಳ್ಳಿ ಹುಡುಗಿ ಕಮಲಿ, ಅವಳ ಪ್ರೀತಿಗಾಗಿ ಹಂಬಲಿಸುವ ರಿಷಿ, ಏನೇ ಆಗಲಿ ಗೆಳತಿಯನ್ನು ಬಿಡಲೊಲ್ಲದ ನಿಂಗಿ. ಈ ಬಾಂಧವ್ಯವನ್ನು ಸೊಗಸಾಗಿ ಕಟ್ಟಿಕೊಟ್ಟಿರುವ ಧಾರಾವಾಹಿ ಕಮಲಿ.

ಕಮಲಿ ಧಾರಾವಾಹಿಯನ್ನು ನಿರ್ದೇಶಿಸಿದ ಅರವಿಂದ ಕೌಶಿಕ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ಅದಕ್ಕೆ ಕಾರಣ ಅವರು ನಿರ್ದೇಶಿಸಿದ ಈ ಕಿರುಚಿತ್ರ. ನವೆಂಬರ್ 4ರಂದು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರದ ಹೆಸರು ಬಿಸಿ ಬೇಳೆ ಬಾತ್.

'ಬಿಸಿ ಬೇಳೆ ಬಾತ್' ಕಿರುಚಿತ್ರ

ಇಂದಿನ ಯಾಂತ್ರಿಕ ಯುಗದಲ್ಲಿ ನಮಗೆ ಸಂಬಂಧಕ್ಕಿಂತಲೂ ಜಾಸ್ತಿ ಕೆಲಸ, ಆಫೀಸ್ ಆಗಿಬಿಟ್ಟಿದೆ. ಅವುಗಳ ಒತ್ತಡದಿಂದಾಗಿ ನಾವು ಮನೆ, ಕುಟುಂಬದ ಬಗ್ಗೆ ಗಮನ ಕೊಡುವುದೇ ಕಡಿಮೆ ಮಾಡಿದ್ದೇವೆ. ಈ ಕಥೆಯನ್ನು ಸೊಗಸಾಗಿ ಬಿಂಬಿಸುವ ಸಿನಿಮಾವೇ ಈ ಬಿಸಿ ಬೇಳೆ ಬಾತ್.

'ಬಿಸಿ ಬೇಳೆ ಬಾತ್' ಕಿರುಚಿತ್ರ

ಈ ಕಿರುಚಿತ್ರದಲ್ಲಿ ಒಬ್ಬ ನೌಕರ ರಜಾ ದಿನದಲ್ಲಿ ಹೇಗೆ ಜೀವನ ಸಾಗಿಸುತ್ತಾನೆ. ಅವನಿಗಾಗುವ ಬೇಸರ, ಮನದ ತೊಳಲಾಟಗಳನ್ನು ಈ ಕಥೆ ಬಿಚ್ಚಿಡುತ್ತದೆ. ಈ ಚಿತ್ರದಲ್ಲಿ ಕಿರುತೆರೆ ಕಲಾವಿದರುಗಳಾದ ರಾಕೇಶ್ ಮಯ್ಯ, ಸುಂದರ್, ಕುಮುಂದವಲ್ಲಿ ಅರುಣ್ ಮೂರ್ತಿ ನಟಿಸಿದ್ದಾರೆ.

ABOUT THE AUTHOR

...view details