ಕರ್ನಾಟಕ

karnataka

ETV Bharat / sitara

ವಿಷ್ಣು, ಶ್ರುತಿ, ಉಪ್ಪಿ ಬರ್ತ್​​ಡೇ - ಶುಭಾಶಯಗಳ ಮಹಾಪೂರ - upendra birthday

ಸೆಪ್ಟೆಂಬರ್​ 18 ಸಾಹಸ ಸಿಂಹ ವಿಷ್ಣುವರ್ಧನ್​, ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಹುಟ್ಟಿರುವ ದಿನ. ಈ ವಿಶೇಷ ದಿನವನ್ನು ಆಯಾ ಸ್ಟಾರ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸಿ ಸಂಭ್ರಮಿಸುತ್ತಿದ್ದಾರೆ.

birthday wishes for 3 celebrities of sandalwood
ವಿಷ್ಣು, ಶೃತಿ, ಉಪ್ಪಿ ಬರ್ತ್​​ಡೇ

By

Published : Sep 18, 2021, 12:18 PM IST

ಸೆಪ್ಟೆಂಬರ್​ 18 ಸ್ಯಾಂಡಲ್ ವುಡ್ ಅಲ್ಲದೇ ಅಭಿಮಾನಿಗಳ ಪಾಲಿಗೆ ವಿಶೇಷವಾದ ದಿನ. ಹೌದು, ಸಾಹಸ ಸಿಂಹ ವಿಷ್ಣುವರ್ಧನ್​, ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಹುಟ್ಟಿರೋದು ಸೆಪ್ಟೆಂಬರ್​ 18ರಂದು. ಈ ವಿಶೇಷ ದಿನವನ್ನು ಆಯಾ ಸ್ಟಾರ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸಿ ಸಂಭ್ರಮಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಸೆಲೆಬ್ರಿಟಿಗಳಿಗೆ ಹುಟ್ಟು ಹಬ್ಬದ ಶುಭಾಶಯಗಳು ಹರಿದು ಬರುತ್ತಿದೆ.

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಸಾಹಸ ಸಿಂಹ ವಿಷ್ಣುವರ್ಧನ್​ ಇಂದು ನಮ್ಮೊಂದಿಗಿದ್ದಿದ್ದರೆ ತಮ್ಮ 71ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಅವರು ಇಹಲೋಕ ತ್ಯಜಿಸಿ 12 ವರ್ಷಗಳಾಗಿದ್ದು, ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.

ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಶುಭಾಶಯ

ಸರ್ಕಾರ ಮೈಸೂರಿನ ಹೆಚ್​ಡಿ ಕೋಟೆ ಹತ್ತಿರ ವಿಷ್ಣುವರ್ಧನ್ ಸ್ಮಾರಕಕ್ಕಾಗಿ ಐದು ಎಕರೆ ಜಮೀನು ನೀಡಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿದೆ. ಕಳೆದ ವರ್ಷದಿಂದ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್, ವಿಷ್ಣುವರ್ಧನ್ ಮಗಳು ಕೀರ್ತಿ ಸೇರಿದಂತೆ ಕುಟುಂಬ ವರ್ಗ ಹಾಗೂ ಅಭಿಮಾನಿಗಳು ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ.

ನಟ ಹುಟ್ಟುಹಬ್ಬಕ್ಕೆ ಶುಭಾಶಯ-ಬುದ್ಧಿವಂತ 2 ಪೋಸ್ಟರ್​ ಬಿಡುಗಡೆ

ಇದನ್ನೂ ಓದಿ:ನನ್ನ ಹುಟ್ಟುಹಬ್ಬ ಇರುವ ಜಾಗದಲ್ಲೇ ಆಚರಿಸಿ ಹರಸಿ: ಅಭಿಮಾನಿಗಳಿಗೆ ರಿಯಲ್ ಸ್ಟಾರ್ ಮನವಿ

ಇನ್ನು ರಿಯಲ್ ಸ್ಟಾರ್ ಉಪೇಂದ್ರ ಕೊರೊನಾ ಕಾರಣದಿಂದ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ವರ್ಷವೂ ಹುಟ್ಟು ಹಬ್ಬ ಆಚರಿಸಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಎಲ್ಲ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಬೇಕಾಗಿ ಬಯಸುತ್ತೇನೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಉಪ್ಪಿ ಪೋಸ್ಟ್​ ಮಾಡಿದ್ದಾರೆ.

ಇನ್ನು ಫ್ಯಾಮಿಲಿ ಹಾಗೂ ಸ್ನೇಹಿತರ‌ ಸಮ್ಮುಖದಲ್ಲಿ ಉಪೇಂದ್ರ ಕೇಕ್ ಕಟ್ ಮಾಡಿ 53ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇನ್ನು ಉಪೇಂದ್ರ ಬರ್ತ್ ಡೇ ಪ್ರಯುಕ್ತ ಕಬ್ಜ, ಬುದ್ದಿವಂತ 2, ಲಗಾಮ್ ಚಿತ್ರತಂಡದಿಂದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

ನಟಿ ಶೃತಿ ಹುಟ್ಟುಹಬ್ಬಕ್ಕೆ ಶುಭಾಶಯ

ಇದನ್ನೂ ಓದಿ:Vishnuvardhan birthday: ಡಾ.ವಿಷ್ಣುವರ್ಧನ್ ಬಗ್ಗೆ ತಿಳಿಯಲೇಬೇಕಾದ 10 ಆಸಕ್ತಿಕರ ವಿಚಾರಗಳು

ಇನ್ನು ಅಳುಮುಂಜಿ ಪಾತ್ರಗಳಿಂದಲೇ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ‌ ಶ್ರುತಿ ಕೂಡ ಸೆಪ್ಟೆಂಬರ್ 18ರಂದು ಹುಟ್ಟಿದ್ದಾರೆ. ಈ ಹಿನ್ನೆಲೆ, ಚಿತ್ರರಂಗದವರು ಹಾಗೂ ಅಭಿಮಾನಿಗಳು ಶ್ರುತಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ. ಸದ್ಯ ರತ್ನನ್ ಪ್ರಪಂಚ ಹಾಗೂ ಭಜರಂಗಿ 2 ಚಿತ್ರತಂಡದಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯ ಹೇಳಲಾಗಿದೆ.

ABOUT THE AUTHOR

...view details