ಹಿಂದಿಯ ಗೀತ ರಚನಾಕಾರ ಜಾವೇದ್ ಅಖ್ತರ್ ಇಂದು 76ನೇ ವಸಂತಕ್ಕೆ ಕಾಲಿಟ್ಟು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಜಾವೇದ್, ರಾಜಕೀಯ ಹೋರಾಟಗಾರ, ಕವಿ, ಸಾಹಿತಿ, ಚಿತ್ರಕಥೆಗಾರರೂ ಹೌದು. ಇವರಿಗೆ ಪದ್ಮಶ್ರೀ, ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಸಹ ಲಭಿಸಿವೆ.
ಜಾವೇದ್ ಅಖ್ತರ್ ಅವರ ಮೂಲ ಹೆಸರು ಜಾದು. ಆದರೆ ಕಾಲಾ ನಂತರ ಇವರ ಹೆಸರನ್ನು ಜಾವೇದ್ ಅಖ್ತರ್ ಎಂದು ಬದಲಿಸಿಕೊಂಡರು. ಇನ್ನು ತಾಯಿಯನ್ನು ಹೆಚ್ಚು ಹಚ್ಚಿಕೊಂಡಿದ್ದ ಇವರಿಗೆ ತಮ್ಮ 8ನೇ ವಯಸ್ಸಿನಲ್ಲಿಯೇ ಮಾತೃವಿಯೋಗವಾಗುತ್ತದೆ. ಇನ್ನು ಜಾವೇದ್ ಅವರ 8ನೇ ವರ್ಷದ ಹುಟ್ಟು ಹಬ್ಬದ ಹಿಂದಿನ ದಿನ ಅವರ ತಾಯಿ ವಿಧಿವಶರಾಗುತ್ತಾರೆ. ಅಲ್ಲದೇ ಅಖ್ತರ್ ತಾಯಿ, ಜೀವನದಲ್ಲಿ ಏನನ್ನಾದರೂ ಮಾಡು, ಏನಾದರೂ ಒಂದು ಆಗುತ್ತದೆ ಎಂಬ ಮಾತನ್ನು ಹೇಳಿದ್ದು, ಆ ಮಾತೇ ಜಾವೇದ್ ಅವರಿಗೆ ಸ್ಪೂರ್ತಿ ಆಗಿತ್ತಂತೆ.