ಕರ್ನಾಟಕ

karnataka

ETV Bharat / sitara

ನಾಟಕ ಅಕಾಡೆಮಿ ಸದಸ್ಯರಾಗಿ ಹಿರಿಯ ನಟ ಬಿರಾದಾರ್ ಆಯ್ಕೆ - ಡ್ರಾಮಾ ಅಕಾಡೆಮಿ ಸದಸ್ಯರಾಗಿ ವೈಜನಾಥ್ ಬಿರಾದಾರ್

ನಾಟಕ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯ ಪೋಷಕ ನಟ ವೈಜನಾಥ್ ಬಿರಾದಾರ್​​​ ಅವರನ್ನು ಕರ್ನಾಟಕ ಪೋಷಕ ಕಲಾವಿದರ ಸಂಘದಿಂದ ಸನ್ಮಾನಿಸಲಾಗಿದೆ.

ವೈಜನಾಥ್ ಬಿರಾದಾರ್ ಅವರಿಗೆ ಸನ್ಮಾನ

By

Published : Nov 12, 2019, 11:35 AM IST

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಿರಿಯ ಪೋಷಕ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಮೊನ್ನೆಯಷ್ಟೇ ಹಾಸ್ಯನಟ ಟೆನ್ನಿಸ್ ಕೃಷ್ಣ ಕೂಡಾ ಸುದ್ದಿಗೋಷ್ಠಿಯೊಂದರಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಚಿತ್ರರಂಗ ಮಾತ್ರವಲ್ಲದೆ ಕರ್ನಾಟಕ ಸರ್ಕಾರ ಕೂಡಾ ಪೋಷಕ ಕಲಾವಿದರ ನೆರವಿಗೆ ಬರದೆ ಅವರನ್ನು ಪ್ರಶಸ್ತಿಗಳು ಹಾಗೂ ಹುದ್ದೆಗಳ ವಿಚಾರದಲ್ಲಿ ಕಡೆಗಣಿಸುತ್ತಿದೆ ಎಂಬ ಆರೋಪವಿದೆ. ಈಗ ಈ ಆರೋಪದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಸರ್ಕಾರ, ನಾಟಕ ಅಕಾಡೆಮಿ ಸದಸ್ಯರನ್ನಾಗಿ ಹಿರಿಯ ಹಾಸ್ಯ ನಟ ಬಿರಾದಾರ್ ಅವರನ್ನು ಆಯ್ಕೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ. ನಾಟಕ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯ ಪೋಷಕ ನಟ ವೈಜನಾಥ್ ಬಿರಾದಾರ ಅವರನ್ನು ಕರ್ನಾಟಕ ಪೋಷಕ ಕಲಾವಿದರ ಸಂಘದಿಂದ ಸನ್ಮಾನಿಸಲಾಗಿದೆ.

ಸನ್ಮಾನ ಕಾರ್ಯಕ್ರಮದ ವೇಳೆ ಕ.ಸಾ.ಪ ಬೆಂಗಳೂರು ಜಿಲ್ಲಾಧ್ಯಕ್ಷ ಮಾಯಣ್ಣ, ಸದಸ್ಯರಾದ ಆಡುಗೋಡಿ ಶ್ರೀನಿವಾಸ್, ಗಂಡಸಿ ಸದಾನಂದ್, ನವನೀತ, ಗುಬ್ಬಿ ನಟರಾಜ್, ಭಾಸ್ಕರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details