ತನ್ವಿ ಪ್ರೊಡಕ್ಷನ್ ಹೌಸ್ ಬ್ಯಾನರ್ ಮೂಲಕ ಗುರು ಸಿ. ಬಂಡಿ ನಿರ್ಮಾಣದಲ್ಲಿ ಡಾ. ದೇವರಾಜ್ ನಿರ್ದೇಶಿಸಿರುವ 'ವೀರಪುತ್ರ' ಚಿತ್ರದ ಟೀಸರ್ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದೆ. ಚಿತ್ರದಲ್ಲಿ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.
'ವೀರಪುತ್ರ' ನಿರ್ದೇಶಕ ಡಾ. ದೇವರಾಜ್ 'ವೀರಪುತ್ರ' ನಿರ್ದೇಶಕ ಡಾ. ದೇವರಾಜ್, ಬಯೋಕೆಮಿಸ್ಟ್ರಿ ಪ್ರೊಫೆಸರ್. ದಶಕಗಳ ಹಿಂದೆ ಕಲಬುರಗಿಯಲ್ಲಿ ನಡೆದ ನೈಜಘಟನೆಯನ್ನು ಆಧರಿಸಿ ದೇವರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಸಿನಿಮಾ ಚಿತ್ರೀಕರಣ ಆರಂಭವಾಗಿಲ್ಲ. ಆದರೆ ವಿಜಯ್ ಸೂರ್ಯ ಹುಟ್ಟುಹಬ್ಬಕ್ಕಾಗಿ ಚಿತ್ರತಂಡ ಟೀಸರ್ ಮಾತ್ರ ಶೂಟಿಂಗ್ ಮಾಡಿ 2 ದಿನಗಳ ಹಿಂದೆ ಬಿಡುಗಡೆ ಮಾಡಿದೆ.
ಆಧುನಿಕ ಅಲೋಪತಿಕ್ ವೈದ್ಯಕೀಯ ಪದ್ಧತಿಯಿಂದ ಪ್ರಾಚೀನ ಆಯುರ್ವೇದ ಚಿಕಿತ್ಸೆ ಕುಂಠಿತವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಚಿತ್ರದಲ್ಲಿ ಹೋರಾಟದ ಕಥೆ ಇದೆ. ಈ ಟೀಸರ್ ಮೊದಲ ದೃಶ್ಯದಲ್ಲಿ ನಾಯಕ ವಿಜಯ್ ಸೂರ್ಯ, ಡಾಕ್ಟರ್ ಒಬ್ಬರನ್ನು ಹೊತ್ತುತಂದು ಆತನ ಮೇಲೆ ಮೆಡಿಸನ್ ಹಾಗೂ ಹಣದ ಕಟ್ಟನ್ನು ಎಸೆದು ಬೆಂಕಿ ಹಚ್ಚುವ ದೃಶ್ಯವನ್ನು ಕಾಣಬಹುದು. ಚಿತ್ರದಲ್ಲಿ ಲವ್ ವಿಚಾರ ಕಡಿಮೆ ಇದೆ. ಆದರೆ ಅಪ್ಪ-ಮಗನ ಅನುಬಂಧದ ದೃಶ್ಯಗಳಿವೆ .
'ವೀರಪುತ್ರ' ನಿರ್ಮಾಪಕ ಗುರು ಸಿ. ಬಂಡಿ 'ಸಪ್ಲಿಮೆಂಟರಿ', 'ಧೀರ ಸಾಮ್ರಾಟ್' ಚಿತ್ರಗಳ ನಿರ್ಮಾಪಕ ಗುರು ಸಿ. ಬಂಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇವರೆಡೂ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ರಾಕೇಶ್, 'ವೀರಪುತ್ರ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ನಾಗೇಂದ್ರ ಅರಸ್ ಸಂಕಲನ, ಸಾಗರ್ ನೃತ್ಯ ಇದೆ. ರಾಘವ್ ಸುಭಾಷ್ 5 ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ. ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಚಿತ್ರದ ಟೀಸರ್ ಬಿಡುಗಡೆಗೊಳಿಸಿದ್ದಾರೆ. ರಥಾವರ, ತಾರಕಾಸುರ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.