ಕರ್ನಾಟಕ

karnataka

ETV Bharat / sitara

ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟ 'ಬಿಲ್​​ಗೇಟ್ಸ್​​​​​'...ಖುಷಿ ಹಂಚಿಕೊಂಡ ಚಿತ್ರತಂಡ - 2 ವಾರಗಳನ್ನು ಪೂರೈಸಿದ ಬಿಲ್​​​ಗೇಟ್ಸ್​ ಸಿನಿಮಾ

ಕಳೆದ ವಾರ 9 ಹಾಗೂ ಈ ವಾರ 11 ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಇಷ್ಟು ಸಿನಿಮಾಗಳ ನಡುವೆಯೂ 'ಬಿಲ್​​ಗೇಟ್ಸ್​​' ಜನರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಚಿಕ್ಕಣ್ಣನ ಕಾಮಿಡಿ ಕಹಾನಿಗೆ ಸಿನಿಪ್ರಿಯರು ಸೋತಿದ್ದಾರೆ. ಅಲ್ಲದೆ ಚಿತ್ರ ಬಾಕ್ಸ್ ಆಫೀಸಿನಲ್ಲಿ ಗೆದ್ದು ಬೀಗಿದೆ.

Billgates
'ಬಿಲ್​​ಗೇಟ್ಸ್​​​​​'

By

Published : Feb 14, 2020, 7:57 PM IST

ಕಾಮಿಡಿ ಕಿಂಗ್ ಚಿಕ್ಕಣ್ಣ ಹಾಗೂ ಕಿರುತೆರೆ ನಟ ಶಿಶಿರ್, ವಿಭಿನ್ನ ಲುಕ್​​ನಲ್ಲಿ ಮಿಂಚಿರುವ 'ಬಿಲ್​ಗೇಟ್ಸ್' ಸಿನಿಮಾ ಕಳೆದ ವಾರ ಬಿಡುಗಡೆಯಾಗಿ ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಚಿಕ್ಕಣ್ಣ ಹಾಗೂ ಶಿಶಿರ್ ಕಾಂಬಿನೇಷನ್ ಮೋಡಿ ಮಾಡಿದ್ದು ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

'ಬಿಲ್​​ಗೇಟ್ಸ್​​​​​' ಸಕ್ಸಸ್ ಮೀಟ್

ಚಿತ್ರದ ಸಕ್ಸಸ್ ಖುಷಿಯಲ್ಲಿರುವ ಚಿತ್ರತಂಡ ಇಂದು ಸುದ್ದಿಗೋಷ್ಠಿ ನಡೆಸಿ ಪ್ರೇಕ್ಷಕರಿಗೆ ಹಾಗೂ ಮಾಧ್ಯಮದವರಿಗೆ ಧನ್ಯವಾದ ಅರ್ಪಿಸಿದರು. ಕಳೆದ ಎರಡು ತಿಂಗಳಿಂದ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕಳೆದ ವಾರ 9 ಹಾಗೂ ಈ ವಾರ 11 ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಇಷ್ಟು ಸಿನಿಮಾಗಳ ನಡುವೆಯೂ 'ಬಿಲ್​​ಗೇಟ್ಸ್​​' ಜನರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಚಿಕ್ಕಣ್ಣನ ಕಾಮಿಡಿ ಕಹಾನಿಗೆ ಸಿನಿಪ್ರಿಯರು ಸೋತಿದ್ದಾರೆ. ಅಲ್ಲದೆ ಚಿತ್ರ ಬಾಕ್ಸ್ ಆಫೀಸಿನಲ್ಲಿ ಗೆದ್ದು ಬೀಗಿದೆ.

ಶಿಶಿರ್, ರೋಜಾ, ಚಿಕ್ಕಣ್ಣ

'ಬಿಲ್​​​​ಗೇಟ್ಸ್​​​' ಚಿತ್ರದ ರಿಮೇಕ್ ರೈಟ್ಸ್ ಗೂ ಬೇಡಿಕೆ ಹೆಚ್ಚಿದ್ದು, ಈಗಾಗಲೇ ತಮಿಳಿಗೆ ದೊಡ್ಡ ಮೊತ್ತಕ್ಕೆ ರೀಮೇಕ್ ರೈಟ್ಸ್ ಸೇಲಾಗಿದೆ ಎಂದು ಚಿತ್ರತಂಡ ಹೇಳಿದೆ. 15 ಮಂದಿ ನಿರ್ಮಾಪಕರು ಸೇರಿ ಸುಮಾರು ಮೂರುವರೆ ಕೋಟಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರದಲ್ಲಿ ರಶ್ಮಿತಾ ರೋಜ, ಅಕ್ಷರಾ ರೆಡ್ಡಿ, ಕುರಿ ಪ್ರತಾಪ್ ಹಾಗೂ ಇನ್ನಿತರರು ನಟಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details