ಕರ್ನಾಟಕ

karnataka

ETV Bharat / sitara

ಬಿಗ್​ಬಾಸ್ ಶೋನಲ್ಲಿ​ ಹೊಡೆದಾಟ.. ಸಹ ಸ್ಪರ್ಧಿಗೆ ಗಾಯ, ಎಲಿಮಿನೇಟ್​​ ಆದ ಸ್ಪರ್ಧಿ! - ಬಿಗ್​ಬಾಸ್​​ ಜೀಶನ್​

ಈ ಸಲದ ಹಿಂದಿ ಬಿಗ್​ಬಾಸ್​ ಒಟಿಟಿಯಲ್ಲಿ ಮಾತ್ರ ಪ್ರಸಾರಗೊಳ್ಳುತ್ತಿದ್ದು, ಅನೇಕ ಹೈಡ್ರಾಮಾ ನಡೆಯುತ್ತಿವೆ. ಸದ್ಯ ಅಂತಹ ಮತ್ತೊಂದು ಘಟನೆ ನಿನ್ನೆಯ ಎಪಿಸೋಡ್​ನಲ್ಲಿ ನಡೆದಿದೆ.

Bigg boss
Bigg boss

By

Published : Aug 26, 2021, 9:49 PM IST

ಹಿಂದಿ ಬಿಗ್​ಬಾಸ್​ ಈ ಸಲ ಒಟಿಟಿಯಲ್ಲಿ ಮಾತ್ರ ಪ್ರಸಾರಗೊಳ್ಳುತ್ತಿದ್ದು, ಹೆಚ್ಚಿನ ಜನರ ಸೆಳೆಯುವ ಉದ್ದೇಶದಿಂದ ಇನ್ನಿಲ್ಲದ ಕಸರತ್ತು ನಡೆಸಲಾಗುತ್ತಿದೆ. ಇದರ ಬೆನ್ನಲ್ಲೇ ಮನೆಯಲ್ಲಿ ಹೈಡ್ರಾಮಾ ನಡೆದಿದ್ದು, ಕೆಲ ಸ್ಪರ್ಧಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಮ್ಯಾನ್ ಬಾಸ್ ಲೇಡಿ ಹೆಸರಿನ ಟಾಸ್ಕ್ ನೀಡಲಾಗಿದ್ದು, ಈ ವೇಳೆ ಸ್ಪರ್ಧಿಗಳಾದ ಜೀಶನ್​ ಹಾಗೂ ಪ್ರತೀಕ್ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಪ್ರತೀಕ್ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ ಮನೆಯಿಂದ ತಕ್ಷಣವೇ ಜೀಶನ್​ಗೆ ಎಲಿಮಿನೇಟ್ ಮಾಡಲಾಗಿದೆ.

ಹಿಂದಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ಕುಂಕುಮ್ ಭಾಗ್ಯ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದ ಜೀಶನ್​​​ ಈ ಸಲದ ಬಿಗ್​ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದರು. ಆದರೆ, ಇದೀಗ ಮನೆಯಲ್ಲಿ ಅಲ್ಲಿನ ನಿಯಮ ಮುರಿದು ಅರ್ಧದಲ್ಲೇ ಹೊರಬಂದಿದ್ದಾರೆ. ಬಿಗ್​ಬಾಸ್​ ಮನೆಗೆ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಕೂಡ ಹೋಗಿದ್ದು, ಸಹಸ್ಪರ್ಧಿಯೊಬ್ಬರಿಗೆ ಮುತ್ತು ನೀಡಿ, ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದರು.

ABOUT THE AUTHOR

...view details