ಕರ್ನಾಟಕ

karnataka

ETV Bharat / sitara

ಬಿಗ್​ಬಾಸ್ ಸೀಸನ್​ 8: ಈ ವಾರ ನಾಮಿನೇಟ್ ಆದವರು ಇವರೇ!

ಈ ಬಾರಿ ದೊಡ್ಮನೆಯಲ್ಲಿ ಕ್ಯಾಪ್ಟನ್ ದಿವ್ಯಾ ಸುರೇಶ್, ಅರವಿಂದ್ ಹಾಗೂ ವೈಷ್ಣವಿ ಹೊರತುಪಡಿಸಿ ಉಳಿದೆಲ್ಲ ಸದಸ್ಯರು ನಾಮಿನೇಟ್ ಆಗಿದ್ದಾರೆ.

Bigg Boss Season 8
ಈ ವಾರ ನಾಮಿನೇಟ್ ಆದವರು ಇವರೇ

By

Published : Jul 20, 2021, 9:37 AM IST

ಬಿಗ್​​​​​​​​​​​​​​​​​​​​​​​​​​​​​ಬಾಸ್ ಮನೆಯಲ್ಲಿ ಈ ವಾರ ಅತ್ಯಂತ ಸವಾಲಿನ ವಾರವಾಗಿದ್ದು, ಕ್ಯಾಪ್ಟನ್ ದಿವ್ಯಾ ಸುರೇಶ್, ಅರವಿಂದ್ ಹಾಗೂ ವೈಷ್ಣವಿ ಹೊರತುಪಡಿಸಿ ಉಳಿದೆಲ್ಲ ಸದಸ್ಯರು ನಾಮಿನೇಟ್ ಆಗಿದ್ದಾರೆ.

ಬಿಗ್​ಬಾಸ್​ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್

ಈ ವಾರದಿಂದ ಮನೆಯಲ್ಲಿ ಕಡಿಮೆ ಸದಸ್ಯರು ಉಳಿದುಕೊಂಡಿದ್ದಾರೆ. ಹೀಗಾಗಿ, ವೈಯಕ್ತಿಕ ಆಟ ಆಡುವಂತೆ ಬಿಗ್​​​​​​​​​​​​​​​​​​​​​​​​​​​​​ಬಾಸ್ ಎಲ್ಲಾ ಸದಸ್ಯರಿಗೂ ಸೂಚಿಸುವುದರ ಜೊತೆಗೆ ಈ ವಾರದ ನಾಮಿನೇಷನ್ ಪ್ರಕ್ರಿಯೆಯನ್ನು ವಿಭಿನ್ನವಾಗಿ ಮಾಡಿದರು.

ಬಿಗ್​ಬಾಸ್​ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್
ಬಿಗ್​ಬಾಸ್​ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್

ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ಆಕ್ಟಿವಿಟಿ ಏರಿಯಾದಲ್ಲಿದ್ದ ಡಬ್ಬಕ್ಕೆ ತಮ್ಮ ನಾಮಿನೇಷನ್‌ಗಳನ್ನು ಕಾರ್ಡ್ ಮೇಲೆ ಬರೆದು ಹಾಕಬೇಕಿತ್ತು. ಹಾಗೆಯೇ ನಾಮಿನೇಟ್ ಮಾಡಿದ್ದಕ್ಕೆ ಸೂಕ್ತ ಕಾರಣವನ್ನೂ ನೀಡಬೇಕಿತ್ತು. ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಶಮಂತ್, ಶುಭಾ ಪೂಂಜಾ, ದಿವ್ಯಾ ಉರುಡುಗ ನಾಮಿನೇಟ್ ಆದರು. ಚಕ್ರವರ್ತಿ ಚಂದ್ರಚೂಡ್ ಮೊದಲೇ ನಾಮಿನೇಟ್ ಆಗಿದ್ದರಿಂದ, ಅವರನ್ನೂ ಸೇರಿ ಒಟ್ಟು ಐವರು ನಾಮಿನೇಷನ್‌ನಲ್ಲಿದ್ದಾರೆ.

ಬಿಗ್​ಬಾಸ್​ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್

ಆದರೆ, ಕ್ಯಾಪ್ಟನ್​ ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು ಮಂಜು ಪಾವಗಡ ಅವರನ್ನು ನಾಮಿನೇಷನ್ ಪ್ರಕ್ರಿಯೆಯಿಂದ ಸೇವ್​​ ಮಾಡಿದ್ದಾರೆ. ಬಿಗ್​ಬಾಸ್ ನೀಡಿರುವ ನೀನಾ - ನಾನಾ ಟಾಸ್ಕ್​ನಲ್ಲಿ ಪ್ರತಿಯೊಬ್ಬ ಸದಸ್ಯರು ವೈಯಕ್ತಿಕ ಆಟವನ್ನು ಆಡಿ, ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಇಡೀ ವಾರ ಆಟ ಆಡಿ ಕೊನೆಯ ಸ್ಥಾನ‌ ಪಡೆಯುವ ಸ್ಪರ್ಧಿ ನೇರವಾಗಿ ನಾಮಿನೇಟ್ ಆಗುತ್ತಾರೆ.

ಬಿಗ್​ಬಾಸ್​ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್

ಇದನ್ನೂ ಓದಿ:ಮಿಸ್​ ಇಂಡಿಯಾ ಯುಎಸ್​ಎ -2021: ಪ್ರಶಸ್ತಿ ಮುಡಿಗೇರಿಸಿಕೊಂಡ ವೈದೇಹಿ

ABOUT THE AUTHOR

...view details