ಕರ್ನಾಟಕ

karnataka

ETV Bharat / sitara

ಟ್ವಿಸ್ಟ್​ ಕೊಟ್ಟ ಬಿಗ್​ಬಾಸ್... ಮನೆಯ 8 ಮಂದಿ ನೇರವಾಗಿ ನಾಮಿನೇಟ್​ - ಕನ್ನಡ ಬಿಗ್​ಬಾಸ್​

ಬಿಗ್​ಬಾಸ್​ ಮನೆಯಲ್ಲಿರುವ ಸದಸ್ಯರಿಗೆ ಇದೀಗ ಬಿಗ್​ ಟ್ವಿಸ್ಟ್​​ ನೀಡಲಾಗಿದ್ದು, 8 ಮಂದಿಯನ್ನ ನೇರವಾಗಿ ನಾಮಿನೇಷನ್​ ಮಾಡಲಾಗಿದೆ.

Bigg Boss Kannada
Bigg Boss Kannada

By

Published : Jul 13, 2021, 12:42 AM IST

ಬಿಗ್​​ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್​​ನಲ್ಲಿ ಇಮ್ಯೂನಿಟಿ ಪಡೆದು ಮತ್ತೊಮ್ಮೆ ಕ್ಯಾಪ್ಟನ್​ ಆಗಿರುವ ಅರವಿಂದ್ ಹಾಗೂ ಮನೆಯಿಂದ ಹೊರಹೋಗಿರುವ ರಘು ಸೇಫ್​​​​ ಮಾಡಿರುವ ಶಮಂತ್ ಹೊರತುಪಡಿಸಿ ಮನೆಯ ಎಲ್ಲ ಸದಸ್ಯರು ನೇರವಾಗಿ ನಾಮಿನೇಟ್ ಆಗಿದ್ದಾರೆ. ಈ ಮೂಲಕ ಮನೆಯ ಸದಸ್ಯರಿಗೆ ಬಿಗ್​​ಬಾಸ್​​ ಶಾಕ್​ ನೀಡಿದ್ದಾರೆ.

ಮನೆಯ 8 ಮಂದಿ ನೇರವಾಗಿ ನಾಮಿನೇಟ್

ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯ ಸುರೇಶ್, ದಿವ್ಯ ಉರುಡುಗ, ಪ್ರಿಯಾಂಕಾ ತಿಮ್ಮೇಶ್, ಪ್ರಶಾಂತ್ ಸಂಬರಗಿ, ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್ ಈ ವಾರ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಈ ವಾರ ಮನೆಯ ಸದಸ್ಯರಿಗೆ ಬಿಗ್​ಬಾಸ್​​ 'ದಂಡಯಾತ್ರೆ' ಎಂಬ ಟಾಸ್ಕ್ ನೀಡಿದ್ದಾರೆ. ಬಿಗ್​ಬಾಸ್ ಮನೆಯ ಸದಸ್ಯರನ್ನು ಎರಡು ತಂಡಗಳನ್ನಾಗಿ ವಿಂಗಡಿಸಿದೆ. ಒಂದು ತಂಡಕ್ಕೆ 'ನಿಂಗೈತೆ ಗುರು' ಎಂದು ಹೆಸರಿಡಲಾಗಿದೆ. ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಸುರೇಶ್‌, ದಿವ್ಯಾ ಉರುಡುಗ, ಮಂಜು ಪಾವಗಡ, ಶಮಂತ್​​ ಈ ತಂಡದಲ್ಲಿದ್ದಾರೆ. ಮತ್ತೊಂದು ತಂಡಕ್ಕೆ‌ 'ವಿಜಯಯಾತ್ರೆ' ಎಂದು ಹೆಸರಿಡಲಾಗಿದೆ. ಅರವಿಂದ್, ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ, ವೈಷ್ಣವಿ, ಪ್ರಿಯಾಂಕಾ ತಿಮ್ಮೇಶ್ ಇದ್ದಾರೆ. ಅತೀ ಹೆಚ್ಚು ಬಾರಿಗೆ ಗೆಲುವು ಸಾಧಿಸುವ ತಂಡದ ಸದಸ್ಯರು ಎಲಿಮಿನೇಷನ್​​ನಿಂದ ಹೊರಗೆ ಉಳಿಯುತ್ತಾರೆ. ಸೋತ ತಂಡದ ಒಬ್ಬ ಸದಸ್ಯ ಎಲಿಮಿನೇಟ್ ಆಗಲಿದ್ದಾರೆ. ಬಿಗ್​ ಬಾಸ್​​ ಕಾಲಕಾಲಕ್ಕೆ ವಿವಿಧ ಟಾಸ್ಕ್​ ನೀಡುತ್ತಿದ್ದಾರೆ.

ಶಮಂತ್,ಅರವಿಂದ್​ ಮನೆಯಲ್ಲಿ ಸೇಫ್​​

ಈಗಾಗಲೇ ಟಾಸ್ಕ್​​ನ ಮೊದಲ ಪಂದ್ಯದಲ್ಲಿ ನಿಂಗೈತೆ ಇರು ತಂಡ ಗೆದ್ದಿದೆ. ವಿಜಯಯಾತ್ರೆ ತಂಡದ ಇಬ್ಬರು ಸದಸ್ಯರಿಗೆ ಮನೆಯಲ್ಲಿ ಅಂಬೆಗಾಲಲ್ಲಿ ನಡೆಯಬೇಕೆಂಬ ಶಿಕ್ಷೆ ನೀಡಲಾಗಿದೆ. ಶುಭಾ ಪೂಂಜಾ ಹಾಗೂ ಪ್ರಶಾಂತ್ ಶಿಕ್ಷೆಗೊಳಪಟ್ಟಿದ್ದಾರೆ. ಶುಭಾ ಶಿಕ್ಷೆಯನ್ನು ಪಾಲಿಸುತ್ತಿದ್ದು, ಪ್ರಶಾಂತ್ ಕೂತಲ್ಲೇ ಕೂತಿದ್ದಾರೆ.

ABOUT THE AUTHOR

...view details