ಈ ವಾರ ಬಿಗ್ಬಾಸ್ ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ. ಮನೆಯ ಕ್ಯಾಪ್ಟನ್ ದಿವ್ಯಾ ಉರುಡುಗ ಅವರು ಶುಭಾ ಪೂಂಜಾರನ್ನು ಉಳಿಸಿಕೊಂಡಿದ್ದಾರೆ.
ನಾಮಿನೇಷನ್ನಿಂದ ಪಾರಾದ ಶುಭಾ ಮನೆಯ ಕ್ಯಾಪ್ಟನ್ ಆಗಿರುವ ದಿವ್ಯಾ ಉರುಡುಗ ಅವರಿಗೆ ಈ ಸಲ ಓರ್ವ ಸದಸ್ಯರನ್ನು ನಾಮಿನೇಷನ್ ಪ್ರಕ್ರಿಯೆಯಿಂದ ಪಾರು ಮಾಡುವ ವಿಶೇಷ ಅಧಿಕಾರ ನೀಡಲಾಯಿತು. ಈ ವಿಶೇಷ ಅಧಿಕಾರವನ್ನು ಉಪಯೋಗಿಸುವ ಮೂಲಕ ದಿವ್ಯಾ ಉರುಡುಗ ಶುಭಾ ಪೂಂಜಾ ಅವರನ್ನು ನಾಮಿನೇಷನ್ ಪ್ರಕ್ರಿಯೆಯಿಂದ ಉಳಿಸಿಕೊಂಡಿದ್ದಾರೆ.
ಬಿಗ್ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಮನೆಯಿಂದ ಹೊರಹೋದ ನಿಧಿ ಸುಬ್ಬಯ್ಯ ಅರವಿಂದ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಹೀಗಾಗಿ, ದಿವ್ಯಾ ಪಾರು ಮಾಡಲು ಸಾಧ್ಯವಾಗಲಿಲ್ಲ.
ಬಿಗ್ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಈ ಮಧ್ಯೆ ಇನ್ನುಮುಂದೆ ಯಾರು ಸ್ನೇಹಿತರಲ್ಲ. ಎಲ್ಲರೂ ತಮ್ಮ ಆಟದತ್ತ ಗಮನ ನೀಡಲಿದ್ದಾರೆ ಎಂದು ಅರವಿಂದ್ ಮಾತನಾಡಿಕೊಂಡರು. ಹಾಗೆಯೇ, ಅರವಿಂದ್ ಈ ವಾರವೂ ಮಂಜು ಹಾಗೂ ದಿವ್ಯಾ ಸುರೇಶ್ ಅವರನ್ನೇ ಟಾರ್ಗೆಟ್ ಮಾಡಿದರು. ಉಳಿದಂತೆ ಮನೆಯಲ್ಲಿ ವೀಕ್ ಕಂಟೆಸ್ಟೆಂಟ್ ಎಂದು ಬಹುತೇಕ ಮಂದಿ ಶುಭಾ ಪೂಂಜಾ ಅವರ ಹೆಸರನ್ನೇ ಸೂಚಿಸಿದ್ದರು. ಈ ಬಗ್ಗೆ ಪ್ರಶಾಂತ್ ಹಾಗೂ ಚಕ್ರವರ್ತಿ ಶುಭಾ ಬಚಾವ್ ಆದರು ಎಂದು ಮಾತನಾಡಿಕೊಂಡರು.