ಬಿಗ್ಬಾಸ್ ಮನೆಯಿಂದ ಹೊರಹೋಗಲು ಈ ವಾರ ಶುಭಾ ಪೂಂಜಾ, ಪ್ರಿಯಾಂಕಾ ತಿಮ್ಮೇಶ್, ವೈಷ್ಣವಿ ಗೌಡ ಹಾಗೂ ಪ್ರಶಾಂತ್ ಸಂಬರಗಿ ನಾಮಿನೇಟ್ ಆಗಿದ್ದಾರೆ.
ನಿಂಗೈತೆ ಇರು ಹಾಗೂ ವಿಜಯ ಯಾತ್ರೆ ತಂಡಗಳ ಸದಸ್ಯರು ನಾಮಿನೇಷನ್‌ನಿಂದ ಪಾರಾಗಲು ಬಿಗ್ಬಾಸ್ ಹಂತ-ಹಂತವಾಗಿ ಟಾಸ್ಕ್ಗಳನ್ನು ನೀಡಿದ್ದರು. ಕೊಟ್ಟಿದ್ದ ಹತ್ತು ಟಾಸ್ಕ್ನಲ್ಲಿ ಆರು ಅಂಕಗಳನ್ನು ಪಡೆದು ನಿಂಗೈತೆ ಇರು ತಂಡ ಜಯ ಸಾಧಿಸಿದ್ದು, ವಿಜಯಯಾತ್ರೆ ತಂಡ ಸೋಲು ಕಂಡಿತ್ತು.
ವಿಜಯಯಾತ್ರೆ ತಂಡ ಸೋತ ಕಾರಣ ತಂಡದಲ್ಲಿದ್ದ ಕ್ಯಾಪ್ಟನ್ ಅರವಿಂದ್ ಹೊರತುಪಡಿಸಿ ಉಳಿದ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ. ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ ಪ್ರಿಯಾಂಕಾ ತಿಮ್ಮೇಶ್ ಹಾಗೂ ಶುಭಾ ಪೂಂಜಾ ನಾಮಿನೇಟ್ ಆಗಿದ್ದಾರೆ. ತಂಡದ ಗೆಲುವಿಗಾಗಿ ಇಮ್ಯುನಿಟಿ ಇದ್ದರೂ ಅರವಿಂದ್ ಉತ್ತಮ ಆಟ ನೀಡಿದ್ದಾರೆ ಎಂದು ಶುಭಾ ಪೂಂಜಾ ಮೆಚ್ಚುಗೆ ವ್ಯಕ್ತಪಡಿಸಿದರು.