ಕರ್ನಾಟಕ

karnataka

ETV Bharat / sitara

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಗ್​​ಬಾಸ್ ಮಾಜಿ ಸ್ಪರ್ಧಿ ಅಕ್ಷತಾ ಪಾಂಡವಪುರ - ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್

ಕಿರುತೆರೆ ವೀಕ್ಷಕರ ಮನಸೆಳೆದಿರುವ ಅಕ್ಷತಾ ಪಾಂಡವಪುರ ತಾಯಿಯಾಗಿದ್ದಾರೆ. ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸಂತಸದ ವಿಚಾರವನ್ನು ಸ್ವತಃ ಅಕ್ಷತಾ ಅವರೇ ಹಂಚಿಕೊಂಡಿದ್ದಾರೆ.

Bigg Boss former contestant Akshatha Pandavapura who gave birth to a baby
ಅಕ್ಷತಾ ಪಾಂಡವಪುರ

By

Published : Jan 16, 2021, 1:46 AM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿಯಾಗಿ ಕಿರುತೆರೆ ವೀಕ್ಷಕರ ಮನಸೆಳೆದಿರುವ ಅಕ್ಷತಾ ಪಾಂಡವಪುರ ತಾಯಿಯಾಗಿದ್ದಾರೆ.

ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸಂತಸದ ವಿಚಾರವನ್ನು ಸ್ವತಃ ಅಕ್ಷತಾ ಅವರೇ ಹಂಚಿಕೊಂಡಿದ್ದಾರೆ. 'ಧನ್ಯವಾದಗಳು ದೇವರೆ, ಮಗಳು' ಎಂದು ಫೋಟೋ ಹಂಚಿಕೊಂಡಿದ್ದಾರೆ.

ಅಕ್ಷತಾ ಪಾಂಡವಪುರ

ಅಕ್ಷತಾ ಅವರ ಸೀಮಂತ ಕಾರ್ಯಕ್ರಮ ಇತ್ತೀಚೆಗಷ್ಟೇ ನೇರವೇರಿತ್ತು. ಅಕ್ಷತಾ ಅವರು ವಿಭಿನ್ನ ರೀತಿಯಲ್ಲಿ ಮೆಟರ್ನಿಟಿ ಫೋಟೋಶೂಟ್ ಅನ್ನು ಅಕ್ಷತಾ ಮಾಡಿಸಿದ್ದು, ಅದನ್ನು ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದರು. ರಂಗಭೂಮಿ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಅಕ್ಷತಾ ಪಾಂಡವಪುರ ಅವರ ಪತಿ ಪ್ರಸನ್ನ ಸಾಗರ್. ಮೂಲತಃ ಸಾಗರದವರಾದ ಇವರು, ರಂಗ ನಿರ್ದೇಶಕರು ಹೌದು. ಅಕ್ಷತಾ ಹಾಗೂ ಪ್ರಸನ್ನ ಅವರದು ಪ್ರೇಮ ವಿವಾಹವಾಗಿದ್ದು, ಎಂಟು ವರ್ಷಗಳ ಹಿಂದೆ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

For All Latest Updates

ABOUT THE AUTHOR

...view details