ಬಿಗ್‍ಬಾಸ್ ಮನೆ ಸದಸ್ಯರಿಗೆ 'ತರತರ ಈ ಎತ್ತರ' ಎಂಬ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ಗೆ ಬೇಕಾಗಿದ್ದ ಪೇಪರ್ ಟಿಶ್ಯೂವನ್ನು ಸ್ಟೋರ್ ರೂಂಮಿನಲ್ಲಿ ಇರಿಸಲಾಗಿತ್ತು. ಅದನ್ನೆತ್ತಿಕೊಂಡು ಬರಬೇಕಾದಾಗ ಅರವಿಂದ್ ರೂಮಿನಲ್ಲಿ ಲಾಕ್ ಆದರು.
Bigg Boss: ಟಾಸ್ಕ್ ಗೆಲ್ಲಲಿಲ್ಲ ಎಂದು ದಿವ್ಯಾ ಮೇಲೆ ಬೇಸರಗೊಂಡ ಅರವಿಂದ್ - ಬಿಗ್ ಬಾಸ್,
ಬಿಗ್ ಬಾಸ್‌ನ ಮುಂದುವರಿದ ಸೀಸನ್ನಲ್ಲಿ ಟಾಸ್ಕ್ ಗೆಲ್ಲಲಿಲ್ಲ ಎಂದು ದಿವ್ಯಾ ಅವರ ಮೇಲೆ ಅರವಿಂದ್ ಬೇಸರಗೊಂಡರು.
ಇತ್ತ ತಂಡದ ಉಳಿದ ಸದಸ್ಯರು ಆಟ ಮುಂದುವರೆಸುತ್ತಾರೆ. ಅರವಿಂದ್ ತಂಡ ಹಾಗೂ ಮಂಜು ತಂಡದ ನಡುವಣ ಗೇಮ್ ಟೈ ಆಗುತ್ತದೆ. ನಂತರ ಹೊರಬಂದ ಅರವಿಂದ್, ಗೇಮ್ ಹೇಗೆ ಟೈ ಆಯಿತು?, ನಾವು ಗೆಲ್ಲಬೇಕಿತ್ತು ಎಂದು ದಿವ್ಯಾ ಅವರನ್ನು ಕೇಳುತ್ತಾರೆ. ಈ ಬಗ್ಗೆ ದಿವ್ಯಾ ವಿವರಿಸಿದ್ದು ಅರವಿಂದ್ಗೆ ಸಮಾಧಾನ ನೀಡಲಿಲ್ಲ.
ದಿವ್ಯಾ ಬೇಸರವಾಗಿ ಕುಳಿತಿದ್ದನ್ನು ಕಂಡ ಅರವಿಂದ್ ಸಮಾಧಾನ ಮಾಡುತ್ತಾರೆ. ನಾವು ಗೇಮ್ ಸೋತಿಲ್ಲ, ಆದರೆ ವಿನ್ ಆಗಬೇಕಿತ್ತು ಅಷ್ಟೇ. ಎಲ್ಲರೂ ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ. ನಾವೆಲ್ಲರೂ ಹಸನ್ಮುಖಿಯಾಗಿರಬೇಕು ಎಂದು ಹೇಳಿ, ನೀವು ಬೇಸರವಾಗಬೇಡಿ, ಮುಂದಿನ ಆಟವನ್ನು ಚೆನ್ನಾಗಿ ಆಡೋಣ ಎಂದು ಹೇಳಿದರು. ಇದೇ ವೇಳೆ ತಂಡದ ಎಲ್ಲ ಸದಸ್ಯರನ್ನೂ ಕರೆದು ಮುಂದಿನ ಆಟವನ್ನು ಚೆನ್ನಾಗಿ ಆಡೋಣ ಎಂದು ಪ್ರೋತ್ಸಾಹಿಸಿದರು.