ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನಲ್ಲಿ ದಿವ್ಯ ಉರುಡುಗ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ, ಚೆಂಡಾಟ ಟಾಸ್ಕ್ನಲ್ಲಿ ಅವರು ಭಾಗವಹಿಸಿಲ್ಲ.
ನಿನ್ನೆ ಬಿಗ್ಬಾಸ್ ನೀಡಿದ್ದ ನಕ್ಷತ್ರ ಅಂಟಿಸುವ ಟಾಸ್ಕ್ ವೇಳೆ ಬೆರಳುಗಳು ಹಾಗೂ ಅಂಗೈ ಭಾಗದಲ್ಲಿ ಗಾಯವಾಗಿದ್ದು, ತಕ್ಷಣವೇ ಪ್ರಥಮ ಚಿಕಿತ್ಸೆಗೆ ಕನ್ಫೆಷನ್ ರೂಮ್ಗೆ ಕರೆದುಕೊಂಡು ಹೋಗಿ ಬ್ಯಾಂಡೇಜ್ ಹಾಕಲಾಯಿತು. ಹೀಗಾಗಿ, ಇಂದಿನ ಎಪಿಸೋಡ್ನಲ್ಲಿ ಪ್ರಸಾರವಾಗುತ್ತಿರುವ ಚೆಂಡಾಟ ಟಾಸ್ಕ್ನಲ್ಲಿ ದಿವ್ಯ ಉರುಡುಗ ಪಾಲ್ಗೊಂಡಿಲ್ಲ.