ಕರ್ನಾಟಕ

karnataka

ETV Bharat / sitara

ಸಾಹಸಸಿಂಹನ ಹುಟ್ಟುಹಬ್ಬಕ್ಕೆ 'ನಿಷ್ಕರ್ಷ' ಚಿತ್ರತಂಡದಿಂದ ಸಿಗುತ್ತಿರುವ ಗಿಫ್ಟ್ ಏನು ಗೊತ್ತಾ ...? - ಡಿಟಿಎಸ್‌ ಸೌಂಡ್‌

ಸೆಪ್ಟೆಂಬರ್ 18 ರಂದು ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟಿದ ದಿನ. ಈ ಅಭಿನಯ ಭಾರ್ಗವನ ಬರ್ತಡೇ ಗಿಫ್ಟ್ ಆಗಿ 'ನಿಷ್ಕರ್ಷ' ಚಿತ್ರದ ನಿರ್ಮಾಪಕ ದೊಡ್ಡನಗೌಡ ಸಿ. ಪಾಟೀಲ್​​ ಆ ಸಿನಿಮಾವನ್ನು ಸುಮಾರು 100 ಥಿಯೇಟರ್​​​ಗಳಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ವಿಷ್ಣುವರ್ಧನ್

By

Published : Aug 29, 2019, 11:11 PM IST

1993ರಲ್ಲಿ ನಿರ್ದೇಶಕ ಸುನೀಲ್​ ಕುಮಾರ್​ ದೇಸಾಯಿ, ನಿರ್ದೇಶಿಸಿದ ನಿಷ್ಕರ್ಷ ಸಿನಿಮಾ ಅಂದಿನ ಕಾಲದ ಸೂಪರ್​ ಹಿಟ್​ ಚಿತ್ರಗಳಲ್ಲಿ ಒಂದು. ಥ್ರಿಲ್ಲರ್​ ಜಾನರ್​ನಲ್ಲಿ ಮೂಡಿಬಂದ ಈ ಸಿನಿಮಾ ಅಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ಸಿನಿಮಾ. ವಿಷ್ಣುವರ್ಧನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

'ನಿಷ್ಕರ್ಷ' ಚಿತ್ರದಲ್ಲಿ ವಿಷ್ಣುವರ್ಧನ್

ಸೆಪ್ಟೆಂಬರ್​ 18ಕ್ಕೆ ಸಾಹಸಸಿಂಹ ವಿಷ್ಣುವರ್ಧನ್​​​​ ಹುಟ್ಟುಹಬ್ಬ. ಇದರ ಪ್ರಯುಕ್ತ ಸೆಪ್ಟೆಂಬರ್‌ 20ರಂದು ನಿಷ್ಕರ್ಷ ಸಿನಿಮಾವನ್ನು ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಈ ಚಿತ್ರದ ನಿರ್ಮಾಪಕ ದೊಡ್ಡನಗೌಡ ಸಿ. ಪಾಟೀಲ್ ಪ್ಲ್ಯಾನ್​​​​ ಮಾಡಿದ್ದಾರೆ. ಬ್ಯಾಂಕ್‌ ದರೋಡೆಯ ಕಥೆಯನ್ನು ಹೊಂದಿದ್ದ ಈ ಚಿತ್ರದಲ್ಲಿ, ಹಾಡು ಇರಲಿಲ್ಲ, ನಾಯಕಿಯೂ ಇಲ್ಲ. ಹೀಗಾಗಿ ಇದನ್ನು ಯಾರೂ ನೋಡುವುದಿಲ್ಲ ಎಂಬ ಮಾತು ಚಿತ್ರ ಬಿಡುಗಡೆಯಾದಾಗ ಕೇಳಿ ಬಂದಿತ್ತು. ಆದರೆ ಈ ಸಿನಿಮಾ ತ್ರಿವೇಣಿ ಮತ್ತು ಸಂತೋಷ್‌ ಚಿತ್ರಮಂದಿಗಳಲ್ಲಿ 106 ದಿನಗಳು ಪೂರೈಸಿ ದಾಖಲೆ ಮಾಡಿತು. ಅಲ್ಲದೆ ಈ ಸಿನಿಮಾಗೆ ಮೂರು ರಾಜ್ಯಪ್ರಶಸ್ತಿಗಳೂ ಬಂದಿವೆ.

ಅನಂತ್​ನಾಗ್, ವಿಷ್ಣುವರ್ಧನ್

25 ವರ್ಷಗಳ ನಂತರವೂ ತನ್ನ ರೋಚಕತೆ ಕಳೆದುಕೊಳ್ಳದ ಈ ಸಿನಿಮಾ ಈಗ ಮತ್ತೊಮ್ಮೆ ತೆರೆ ಕಾಣುತ್ತಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಡಿಟಿಎಸ್‌ ಸೌಂಡ್‌ನೊಂದಿಗೆ ಹಿಂದಿ ಮತ್ತು ಕನ್ನಡದಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ. ಸೃಷ್ಟಿ ಫಿಲಂಸ್ ಬ್ಯಾನರ್ ಅಡಿ ತಯಾರಾದ ಈ ಸಿನಿಮಾದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್​​ ಬಹಳ ಮನೋಜ್ಞವಾಗಿ ಅಭಿನಯಿಸಿದ್ದರು. ಒಂದೇ ಲೊಕೇಶನ್​ನಲ್ಲಿ ಚಿತ್ರೀಕರಣಗೊಂಡ ಈ ಕನ್ನಡ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು.

ABOUT THE AUTHOR

...view details