ಕರ್ನಾಟಕ

karnataka

ETV Bharat / sitara

ಪೊಲೀಸರಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿ ಇನ್ನಷ್ಟು 'ಶೈನ್'​ ಆದ ಬಿಗ್​ ಬಾಸ್​ ವಿನ್ನರ್​ - ಬಿಗ್​​ಬಾಸ್ ವಿನ್ನರ್ ಶೈನ್ ಶೆಟ್ಟಿ

ರಾಜ್ಯಾದ್ಯಂತ ಲಾಕ್​ಡೌನ್​ ಆದೇಶವಿದ್ದು, ಇದರ ಪಾಲನೆಯಲ್ಲಿ ಪೊಲೀಸ್​ ಅಧಿಕಾರಿಗಳ ಪಾತ್ರ ಮಹತ್ವದಾಗಿದೆ. ತಮ್ಮ ಕುಟುಂಬಸ್ಥರನ್ನು ಬಿಟ್ಟು ಜನರ ರಕ್ಷಣೆಗೆ ಮುಂದಾಗಿದ್ದಾರೆ. ಇದನ್ನು ಮನಗಂಡ ಬಿಗ್​ಬಾಸ್​ ವಿಜೇತ ಶೈನ್​ ಶೆಟ್ಟಿ, ದಕ್ಷಿಣ ವಿಭಾಗ ಪೊಲೀಸರಿಗೆ ಅಗತ್ಯ ವಸ್ತಗಳನ್ನು ವಿತರಣೆ ಮಾಡಿದ್ದಾರೆ.

Big Boss Winner Shine Shetty distributes groceries to city police
ಸಿಟಿ ಪೊಲೀಸರಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ ಬಿಗ್​​ಬಾಸ್ ವಿನ್ನರ್ ಶೈನ್ ಶೆಟ್ಟಿ

By

Published : Mar 30, 2020, 10:56 AM IST

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಪಣ ತೊಟ್ಟಿದ್ದು, ಸರ್ಕಾರದ ಜೊತೆ ಕೈ ಜೋಡಿಸಿರುವ ಪೊಲೀಸರು, ಬೀದಿಗಿಳಿದು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಈ ನಡುವೆ ಬಿಗ್​ಬಾಸ್​​ ವಿಜೇತ ಶೈನ್​ ಶೆಟ್ಟಿ ಸಿಟಿ ಪೊಲೀಸರಿಗೆ ಅಗತ್ಯ ವಸ್ತಗಳನ್ನು ವಿತರಣೆ ಮಾಡಿದ್ದಾರೆ.

ಬಿಗ್​​ಬಾಸ್ ವಿನ್ನರ್ ಶೈನ್ ಶೆಟ್ಟಿ

ರಾಜ್ಯಾದ್ಯಂತ ಲಾಕ್​ಡೌನ್​ ಆದೇಶವಿದ್ದು, ಇದರ ಪಾಲನೆಯಲ್ಲಿ ಪೊಲೀಸ್​ ಅಧಿಕಾರಿಗಳ ಪಾತ್ರ ಮಹತ್ವದಾಗಿದೆ. ತಮ್ಮ ಕುಟುಂಬಸ್ಥರನ್ನು ಬಿಟ್ಟು ಜನರ ರಕ್ಷಣೆಗೆ ಮುಂದಾಗಿದ್ದಾರೆ. ಇದನ್ನು ಮನಗಂಡ ಬಿಗ್​ಬಾಸ್​ ವಿಜೇತ ಶೈನ್​ ಶೆಟ್ಟಿ, ದಕ್ಷಿಣಾ ವಿಭಾಗ ಪೊಲೀಸ್ ವ್ಯಾಪ್ತಿಯ ಚೆನ್ನಮ್ಮನಕೆರೆ ಅಚ್ಚುಕಟ್ಟು, ಸುಬ್ರಮಣ್ಯಪುರ,ಹನುಮಂತನಗರ ಪೊಲೀಸರಿಗೆ ದಿನಸಿ ಅಕ್ಕಿ, ಬೇಳೆ, ಎಣ್ಣೆ, ಉಪ್ಪು ದಿನಸಿ ವಸ್ತುಗಳನ್ನು ವಿತರಣೆ ಮಾಡಿ ಅವರ ಕಾರ್ಯಕ್ಕೆ ಧನ್ಯವಾದ ಹೇಳಿದರು.

ಸಿಟಿ ಪೊಲೀಸರಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ ಬಿಗ್​​ಬಾಸ್ ವಿನ್ನರ್ ಶೈನ್ ಶೆಟ್ಟಿ

ಈ ಸಾಮಾಗ್ರಿಗಳಿಂದ ಪೊಲೀಸರು ಠಾಣೆಯಲ್ಲೇ ಆಹಾರ ತಯಾರಿಸಿ ತಮಗೆ ಹಾಗೂ ಬಡವರಿಗೂ ಆಹಾರ ಪೂರೈಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನು ಶೈನ್ ಕಾರ್ಯಕ್ಕೆ‌ ದಕ್ಷಿಣಾ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್​​ಬಾಸ್ ವಿನ್ನರ್ ಶೈನ್ ಶೆಟ್ಟಿ

ABOUT THE AUTHOR

...view details