ಆಹಾರ ಅರಸಿ ನಾಡಿಗೆ ಬಂದಿದ್ದ ಗರ್ಭಿಣಿ ಆನೆಗೆ ಅನಾನಸ್ ಹಣ್ಣಿನಲ್ಲಿ ಪಟಾಕಿ ಇಟ್ಟು ತಿನ್ನಲು ಕೊಟ್ಟ ಜನರ ಹೀನಾಯ ಕೃತ್ಯವನ್ನು ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಶಶಿಕುಮಾರ್ ಖಂಡಿಸಿದ್ದಾರೆ.
ಕೇರಳದಲ್ಲಿ ಆನೆ ಸಾವಿಗೆ ಕಾರಣರಾದವರ ವಿರುದ್ಧ ಕಿಡಿಕಾರಿದ ಬಿಗ್ ಬಾಸ್ ವಿನ್ನರ್ - ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್
ಆನೆ ಉಳಿದ ಪ್ರಾಣಿಗಳಿಂತ ಭಿನ್ನ. ಯಾಕೆಂದರೆ ಅದರ ಗರ್ಭಧಾರಣೆ ಸಮಯ 22 ತಿಂಗಳು. ಅಂದರೆ ಎರಡು ವರ್ಷಗಳ ಕಾಲ ಅದು ನನ್ನ ಮರಿಯನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುತ್ತದೆ. ಅಂತಹ ಸಮಯದಲ್ಲಿ ಇಂತಹ ಸಂಗತಿ ನಡೆದಿರುವುದು ವಿಪರ್ಯಾಸವೇ ಸರಿ ಎಂದು ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಶಶಿಕುಮಾರ್ ಖಂಡಿಸಿದ್ದಾರೆ.
ಈ ಭೂಮಿ ಯಾರ ಅಪ್ಪನ ಆಸ್ತಿಯಲ್ಲ ಎಂದು ಅವರು ಗುಡುಗಿದ್ದಾರೆ. ಕಾಡನ್ನು ಸಂಪೂರ್ಣ ನಾಶಮಾಡಿ ನಾಡನ್ನಾಗಿ ಪರಿವರ್ತಿಸಿರುವುದು ನಾವು. ಹೀಗೆ ಕಾಡು ನಾಶವಾದಾಗ, ಅಲ್ಲಿ ಏನು ಇರುವುದಿಲ್ಲ. ಆಗ ಆಹಾರವನ್ನು ಅರಸಿಕೊಂಡು ಪ್ರಾಣಿಗಳು ನಾಡಿಗೆ ಬಂದೇ ಬರುತ್ತವೆ? ಇದರಲ್ಲಿ ತಪ್ಪು ಯಾರದ್ದು ಎಂದು ಅವರು ಪ್ರಶ್ನಿಸಿದ್ದಾರೆ.
ಆನೆ ಉಳಿದ ಪ್ರಾಣಿಗಳಿಂತ ಭಿನ್ನ. ಯಾಕೆಂದರೆ ಅದರ ಗರ್ಭಧಾರಣೆ ಸಮಯ 22 ತಿಂಗಳು. ಅಂದರೆ ಎರಡು ವರ್ಷಗಳ ಕಾಲ ಅದು ನನ್ನ ಮರಿಯನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುತ್ತದೆ. ಅಂತಹ ಸಮಯದಲ್ಲಿ ಇಂತಹ ಸಂಗತಿ ನಡೆದಿರುವುದು ವಿಪರ್ಯಾಸವೇ ಸರಿ. ಅದು ಕೂಡಾ ದೇಶದಲ್ಲಿಯೇ ಹೆಚ್ಚಿನ ಸಾಕ್ಷರತೆಯನ್ನು ಹೊಂದಿದ ಕೇರಳದಲ್ಲಿ ಈ ರೀತಿ ಆಗಿರುವುದು ನಿಜಕ್ಕೂ ಬೇಸರತರಿಸಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.