ಕರ್ನಾಟಕ

karnataka

ETV Bharat / sitara

ಬಿಗ್​ ಬಾಸ್​ ಸೀಸನ್​​-7.. 6 ಸ್ಪರ್ಧಿಗಳು ದೊಡ್ಡ ಮನೆಗೆ ಎಂಟ್ರಿ, ಯಾರ್ಯಾರು ಗೊತ್ತಾ..?

ಈಗಾಗ್ಲೇ ಪತ್ರಕರ್ತ ರವಿ ಬೆಳಗೆರೆ, ನಟ ಕುರಿ ಪ್ರತಾಪ್​, ನಟಿ ಪ್ರಿಯಾಂಕ ಎಂಟ್ರಿ ಕೊಟ್ಟಿದ್ದಾರೆ. ಈಗ ಡ್ಯಾನ್ಸರ್​ ಕಮ್ ಹಾಡುಗಾರ್ತಿ ಚಂದನ ನಾಲ್ಕನೇ ಸ್ಪರ್ಧಿಯಾಗಿ ಮತ್ತು 5ನೇ ಸ್ಪರ್ಧಿ ಹಾಡುಗಾರ ಮತ್ತು ನಿರ್ದೇಶಕ ವಾಸುಕಿ ವೈಭವ್​ ಎಂಟ್ರಿ ಕೊಟ್ಟಿದ್ದಾರೆ. ಆರನೇ ಸ್ಪರ್ದಿಯಾಗಿ ನಾಗಿಣಿ ಧಾರವಾಹಿಯ ನಟಿ ದೀಪಿಕಾ ದಾಸ್​ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಿದ್ದಾರೆ.

ಬಿಗ್​ ಬಾಸ್​ ಸೀಸನ್​​-7

By

Published : Oct 13, 2019, 8:49 PM IST

Updated : Oct 13, 2019, 9:36 PM IST

ಕನ್ನಡದ ಬಿಗ್​ ಬಾಸ್​ ಸೀಸನ್​ 7ಕ್ಕೆ ಗ್ರ್ಯಾಂಡ್​ ಓಪನಿಂಗ್​ ಶುರುವಾಗಿದೆ. ಇದೀಗ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಡುತ್ತಿದ್ದು, ಸದ್ಯ 5 ಜನ ಬಿಗ್‌ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಈಗಾಗ್ಲೆ ಪತ್ರಕರ್ತ ರವಿ ಬೆಳಗೆರೆ, ನಟ ಕುರಿ ಪ್ರತಾಪ್​, ಅಗ್ನಿಸಾಕ್ಷಿ ಧಾರಾವಾಹಿಯ ನಟಿ ಪ್ರಿಯಾಂಕಾ ಎಂಟ್ರಿ ಕೊಟ್ಟಿದ್ದು, ಸದ್ಯ ನಾಲ್ಕನೇ ಸ್ಪರ್ಧಿಯಾಗಿ ಡ್ಯಾನ್ಸರ್​ ಕಮ್‌ಹಾಡುಗಾರ್ತಿ ಚಂದನ ಮತ್ತು 5ನೇ ಸ್ಪರ್ಧಿಯಾಗಿ ಹಾಡುಗಾರ ಮತ್ತು ನಿರ್ದೇಶಕ ವಾಸುಕಿ ವೈಭವ್​ ಎಂಟ್ರಿ ಕೊಟ್ಟಿದ್ದಾರೆ.

ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ಚಂದನಾ, ಕಲರ್ಸ್​ ಸೂಪರ್​ನಲ್ಲಿ ಪ್ರಸಾರವಾಗುವ ರಾಜರಾಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇನ್ನು, ಸದ್ಯ ಆರನೇ ಸ್ಪರ್ಧಿಯಾಗಿ ನಾಗಿಣಿ ಧಾರವಾಹಿಯ ನಟಿ ದೀಪಿಕಾ ದಾಸ್​ ಎಂಟ್ರಿ ಕೊಟ್ಟಿದ್ದಾರೆ.

Last Updated : Oct 13, 2019, 9:36 PM IST

ABOUT THE AUTHOR

...view details