ಬಿಗ್ ಬಾಸ್ ಶೋ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಅನೇಕ ಕುತೂಹಲಗಳು ಕಾದಿವೆ ಎಂಬುದನ್ನು ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋ ಹೇಳುತ್ತಿದೆ.
ಗ್ರ್ಯಾಂಡ್ ಓಪನಿಂಗ್ ದಿನದಂದು ಕಾರ್ಯಕ್ರಮದ ರೂವಾರಿ ಕಿಚ್ಚ ಸುದೀಪ್ ಒಬ್ಬೊಬ್ಬ ಸ್ಪರ್ಧಿಗಳನ್ನು ಕರೆದು ಪರಿಚಯ ಮಾಡಿ ಮನೆಯೊಳಗೆ ಕಳುಹಿಸಿಕೊಡುವ ಮುನ್ನ ಅವರ ಕೈಗೆ ಒಂದೊಂದು ಲಕೋಟೆಯನ್ನು ನೀಡಿದ್ದರು. ಇದೇ ವೇಳೆ ಮುಂದಿನ ಬಿಗ್‌ಬಾಸ್ ಆದೇಶದವರೆಗೂ ಅದನ್ನು ತೆರೆಯುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರು. ಈ ವೇಳೆ ಪ್ರೇಕ್ಷಕರ ಮನದಲ್ಲಿ ಅದ್ರಲ್ಲೇನಿರಬಹುದು ಎಂಬ ಕುತೂಹಲ ಮನೆಮಾಡಿತ್ತು, ಇದೀಗ ಆ ಗುಟ್ಟು ರಟ್ಟಾಗುವ ಸಮಯ ಬಂದಿದೆ.