ಬಿಗ್ ಬಾಸ್ ಮನೆ ಅಂದ್ರೇನೇ ಹಾಗೆ. ಅದು ಊಹಾಪೋಹಗಳ ಗೂಡು. ಕೆಲವು ಬಾರಿ ಅಲ್ಲಿ ನಡೆಯುವ ಸನ್ನಿವೇಶಗಳೇ ಬೇರೆ. ಹೊರಗಿನ ಜನ ಅರ್ಥೈಸಿಕೊಳ್ಳುವ ರೀತಿಯೇ ವಿಭಿನ್ನ. ವಿಷಯ ಅಂದ್ರೆ, ಬಿಗ್ಬಾಸ್ನ ಪ್ರತೀ ಸೀಸನ್ನಲ್ಲೂ ಒಂದೊಂದು ಪ್ರೇಮ ಕಥೆಗಳು ಹುಟ್ಟಿಕೊಳ್ಳುವುದು ಇದೀಗ ರೂಢಿಯಾಗಿದೆ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರ ಪ್ರೇಮ ಕಥನ ಕಳೆದ ಸೀಸನ್‌ನಲ್ಲಿ ಶುರುವಾಗಿತ್ತು. ದೊಡ್ಡ ಮನೆಯಲ್ಲಿ ಮನೆಯಲ್ಲಿ ಇದೀಗ ಮತ್ತೊಂದು ಪ್ರೇಮಾಂಕುರವಾಗುತ್ತಿದೆ ಎನ್ನಲಾಗಿದೆ.
ಕಳೆದ ರಾತ್ರಿ ಇದ್ದಕ್ಕಿದ್ದಂತೆ ಶೈನ್ ಶೆಟ್ಟಿ ಬಳಿ ಹೋದ ಚೈತ್ರಾ ಕೊಟ್ಟೂರ್, ಕೆಲವು ಪ್ರಶ್ನೆಗಳನ್ನು ಹಾಕಿದ್ದಾರೆ. ಇದಕ್ಕೆ ಶೈನ್ ಶೆಟ್ಟಿ ನಾನು ಉಡುಪಿಯಲ್ಲಿ ಓದಿದ್ದು ಎಂದಿದ್ದಾರೆ. ನಂತರ ಇವರ ನಡುವೆ ಮಾತುಕತೆ ಮುಂದುವರೆದಿದ್ದು, ಚೈತ್ರ ನಾನು ಕೋಲಾರದವಳು, ನೀವು ಯಾರನ್ನಾದರೂ ಲವ್ ಮಾಡ್ತಿದ್ದೀರಾ? ನೀವು ಮದುವೆಯಾಗಬೇಕಾದ ಹುಡುಗಿ ಹೇಗಿರಬೇಕು ಎಂದು ಕೇಳಿದ್ರು.
ಈ ವೇಳೆ ಶೈನ್ ಶೆಟ್ಟಿ, ನಾನು ಮದುವೆಯಾಗುವವಳು ಸದ್ಗುಣ ಸಂಪನ್ನೆ ಆಗಿರಬೇಕು ಎಂದರು. ಈ ವೇಳೆ ನನ್ನ ಬಗ್ಗೆ ನಿಮಗೆ ಏನನ್ನಿಸುತ್ತದೆ ಚೈತ್ರ ಮರು ಪ್ರಶ್ನಿಸಿದ್ದಕ್ಕೆ, ನಾನಿನ್ನೂ ಯೋಚಿಸಿಲ್ಲ. ಈ ಮನೆಯಿಂದ ಹೋದ ಒಂದು ತಿಂಗಳಲ್ಲಿ ನಿಮ್ಮ ಮದುವೆಯಾಗಲಿದೆ. ನಿಮ್ಮ ಅಭಿರುಚಿಗೆ ತಕ್ಕಂತ ಹುಡುಗ ಸಿಗಲಿದ್ದಾನೆ ಎಂದಿದ್ದಾರೆ. ಅದಕ್ಕೆ ಚೈತ್ರಾ ಪ್ರತಿಕ್ರಿಯಿಸಿ, ನಿಮ್ಮಲ್ಲಿ ಅಭಿರುಚಿ ಇಲ್ಲವಾ? ಎಂದು ಪ್ರಶ್ನಿಸಿದ್ದು, ಇವರ ಈ ಪ್ರೀತಿ-ಪ್ರೇಮ, ಮದುವೆಯ ಮಾತುಗಳು ಬಿಗ್‌ಬಾಸ್ ಮನೆಯಲ್ಲಿ ಪ್ರೇಮಾಂಕುರವಾಗುತ್ತಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.