ಕರ್ನಾಟಕ

karnataka

ETV Bharat / sitara

ಈ ಬಾರಿಯೂ ದೊಡ್ಮನೆಗೆ ಹೋಗಿದ್ದಾರೆ ನಿರೂಪಕಿ, ಹಿಂದೆ ಹೋದವರಾರು? - ಬಿಗ್​ ಬಾಸ್​​ ಸೀಸನ್​ 7

ಬಿಗ್‌ಬಾಸ್​​ನಲ್ಲಿ ಸಿನಿಮಾ ಕಲಾವಿದರು, ಕಿರುತೆರೆ ಕಲಾವಿದರ ಜೊತೆಗೆ ನಿರೂಪಕ ನಿರೂಪಕಿಯರು ಕೂಡಾ ಭಾಗವಹಿಸಿದ್ದಾರೆ. ಈ ಬಾರಿಯೂ ಮುದ್ದಾದ ನಿರೂಪಕಿ ಮನೆಯೊಳಗೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್​​

By

Published : Oct 15, 2019, 4:14 PM IST

ಕಿರುತೆರೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದ ಬಿಗ್‌ಬಾಸ್ ಆರಂಭವಾಗಿ ಎರಡು ದಿನಗಳಾಗಿದೆ‌. ಯಾರೆಲ್ಲಾ ಬಿಗ್‌ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಾರೆ ಎಂಬ ಕುತೂಹಲಕ್ಕೆ ಭಾನುವಾರ ತೆರೆ ಬಿದ್ದಾಗಿದೆ. ಈ ಬಿಗ್ ಮನೆಯಲ್ಲಿ ಅವರೆಲ್ಲಾ ಹೇಗೆ ಇರ್ತಾರೆ, ಯಾವ ರೀತಿ ಆಟ ಆಡುತ್ತಾರೆ, ಕೊನೆಯ ತನಕ ಯಾರು ಇರ್ತಾರೆ ಎಂಬುದನ್ನಷ್ಟೇ ನೋಡಬೇಕಾಗಿದೆ.

ಬಿಗ್‌ಬಾಸ್​​ನಲ್ಲಿ ಸಿನಿಮಾ ಕಲಾವಿದರು, ಕಿರುತೆರೆ ಕಲಾವಿದರ ಜೊತೆಗೆ ನಿರೂಪಕ ನಿರೂಪಕಿಯರು ಕೂಡಾ ಭಾಗವಹಿಸಿದ್ದಾರೆ. ಕಳೆದ ಆರು ಸೀಸನ್​​ಗಳಲ್ಲಿಯೂ ನಿರೂಪಕ ನಿರೂಪಕಿಯವರು ಪಾಲ್ಗೊಂಡಿದ್ದು ಈ ಬಾರಿಯೂ ಮುದ್ದಾದ ನಿರೂಪಕಿ ಬಲಗಾಲಿಟ್ಟು ಮನೆಯೊಳಗೆ ಬಂದಿದ್ದಾರೆ.

ಅಂದಹಾಗೆ, ಕಳೆದ 6 ಸೀಸನ್‌ಗಳಲ್ಲಿ ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಅನುಪಮ ಭಟ್, ಅನುಶ್ರೀ, ರೆಹಮಾನ್, ಶೀತಲ್ ಶೆಟ್ಟಿ, ಕಾವ್ಯ ಶಾಸ್ತ್ರಿ, ಅಪರ್ಣಾ ಬಿಗ್‌ ಬಾಸ್‌ ಮನೆಯ ಸ್ಫರ್ಧಿಗಳಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವ ಚೆಂದುಳ್ಳಿ ಚೆಲುವೆ ಚೈತ್ರಾ ವಾಸುದೇವನ್!

ಇಂಜಿನಿಯರಿಂಗ್ ಪದವಿ ಪಡೆದಿರುವ ಚೈತ್ರಾ, ಸದ್ಯ ನಿರೂಪಕಿಯಾಗಿ ಪರಿಚಿತ. ಕಲರ್ಸ್ ಕನ್ನಡ ಸಿನಿಮಾ ಚಾನೆಲ್​​​​ನಲ್ಲಿ 'ಒಂದು ಸಿನಿಮಾ ಕತೆ' ಎಂಬ ಕಾರ್ಯಕ್ರಮ ನಿರೂಪಿಸುತ್ತಿರುವ ಚೈತ್ರಾ, ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿ ಸೇರಿದಂತೆ ಹಲವು ವಾಹಿನಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದಾರೆ.

ಕನ್ನಡ ಬಿಗ್‌ ಬಾಸ್​ನಲ್ಲಿ ಭಾಗಿಯಾಗಿದ್ದ ನಿರೂಪಕ ನಿರೂಪಕಿಯರು :

ಅಕುಲ್​ ಬಾಲಾಜಿ
ಸೃಜನ್​ ಲೋಕೇಶ್​
ಅನುಶ್ರೀ
ಅಪರ್ಣಾ
ಶೀತಲ್​ ಶೆಟ್ಟಿ
ರೆಹಮಾನ್​​
ಕಾವ್ಯ
ಅನುಪಮಾ
ಚೈತ್ರಾ ವಾಸುದೇವನ್

ABOUT THE AUTHOR

...view details