ಕರ್ನಾಟಕ

karnataka

ETV Bharat / sitara

'ನನಗೆ ನಟಿಸಲು ಮಾಧ್ಯಮ ಮುಖ್ಯವಲ್ಲ, ಉತ್ತಮ ಪ್ರದರ್ಶನ ನೀಡುವುದು ಮುಖ್ಯ' - ಬಿಗ್​ ಬಾಸ್​​ ಖ್ಯಾತಿಯ ಚಂದನ್​ ಆಚಾಯ್​​

ಬಿಗ್ ಬಾಸ್ ರಿಯಾಲಿಟಿ ಶೋ ನಂತರ ನನಗೆ ಕಿರುತೆರೆಯಿಂದ ಆಸಕ್ತಿದಾಯಕವಾದ ಅವಕಾಶಗಳು ಬಂದಿರಲಿಲ್ಲ. ಅದೇ ಕಾರಣದಿಂದ ನಾನು ಸಿನಿಮಾಗಳ ಮೇಲೆ ಗಮನ ಹರಿಸಿದೆ. ಅಂದಹಾಗೆ ಯಾವ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬುದು ನನಗೆ ಮುಖ್ಯವಲ್ಲ, ಬದಲಿಗೆ ಉತ್ತಮ ಪ್ರದರ್ಶನ ನೀಡುವುದಷ್ಟೇ ಮುಖ್ಯ ಎಂದಿದ್ದಾರೆ ಚಂದನ್ ಆಚಾರ್.​​

big boss chandan  speak about his cinema opportunity
big boss chandan speak about his cinema opportunity

By

Published : Dec 29, 2020, 5:44 PM IST

Updated : Dec 29, 2020, 8:24 PM IST

ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಗಮನ ಸೆಳೆದ ಚಂದನ್ ಆಚಾರ್ ಇದೀಗ ಸಿನಿಮಾದ ಬಗ್ಗೆ ಗಮನ ವಹಿಸುತ್ತಿದ್ದಾರೆ.

"ಬಿಗ್ ಬಾಸ್ ರಿಯಾಲಿಟಿ ಶೋ ನಂತರ ನನಗೆ ಕಿರುತೆರೆಯಿಂದ ಆಸಕ್ತಿದಾಯಕವಾದ ಅವಕಾಶಗಳು ಬಂದಿರಲಿಲ್ಲ. ಅದೇ ಕಾರಣದಿಂದ ನಾನು ಸಿನಿಮಾಗಳ ಮೇಲೆ ಗಮನ ಹರಿಸಿದೆ. ನಾನು ಯಾವ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬುದು ನನಗೆ ಮುಖ್ಯವಲ್ಲ, ಬದಲಿಗೆ ಉತ್ತಮ ಪ್ರದರ್ಶನ ನೀಡುವುದಷ್ಟೇ ಮುಖ್ಯ" ಎಂದು ಚಂದನ್ ಆಚಾರ್ ಹೇಳುತ್ತಾರೆ.

ಚಂದನ್ ಆಚಾರ್

ಬಿಗ್ ಬಾಸ್ ನ ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶಾಂತಂ ಪಾಪಂ' ನ ನಿರೂಪಣೆ ಮಾಡುವ ಮೂಲಕ ನಿರೂಪಕರಾಗಿ ಚಂದನ್ ಕಿರುತೆರೆಗೆ ಮರಳಿದ್ದರು. ಇದರ ಹೊರತಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗದ ಕಾರಣ ಸೀದಾ ಬೆಳ್ಳಿತೆರೆಗೆ ಹಾರಿದ ಇವರು 'ಮಂಗಳವಾರ ರಜಾದಿನ' ಸಿನಿಮಾದಲ್ಲಿ ಅಭಿನಯಿಸಿದ್ದರು.

ಚಂದನ್ ಆಚಾರ್

ಇದೀಗ ಚಂದನ್‌ 'ಜೆರ್ಸಿ 12' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಕಿ ಆಟದ ಕುರಿತಾಗಿರುವ ಈ ಸಿನಿಮಾವನ್ನು ಚೇತನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಕುರಿತು ಹೇಳಿರುವ ಚಂದನ್, "ಕಾಲೇಜಿನಲ್ಲಿ ನಡೆಯುವ ಈ ಕಥೆಯಲ್ಲಿ ಯುವಕರಿಗೆ ಆಟದ ಕುರಿತು ಇರುವ ಆಸಕ್ತಿಯನ್ನು ತೋರಿಸಲಾಗಿದೆ. ನಾನು ಮೈಸೂರಿನ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದೇನೆ. ಮೂವರು ಮಹಿಳೆಯರ ಪಾತ್ರಕ್ಕೆ ಹುಡುಕಾಟ ನಡೆಯುತ್ತಿದೆ" ಎಂದಿದ್ದಾರೆ.

ಚಂದನ್ ಆಚಾರ್
Last Updated : Dec 29, 2020, 8:24 PM IST

ABOUT THE AUTHOR

...view details