ಕರ್ನಾಟಕ

karnataka

ETV Bharat / sitara

ಕೊರೊನಾ ಲಸಿಕೆಯ ಎರಡನೇ ಡೋಸ್​ ಪಡೆದ ಬಾಲಿವುಡ್​ ಬಿಗ್​ಬಿ - ಅಮಿತಾಬ್​ ಬಚ್ಚನ್ ಸುದ್ದಿ

ಲಸಿಕೆ ಹಾಕಿಸಿಕೊಳ್ಳುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿರುವ ಅಮಿತಾಬ್ ಅವರು, ಎರಡನೇಯ ಡೋಸ್ ಪಡೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

amitab bachan
ಬಾಲಿವುಡ್​ ಬಿಗ್​ಬಿ

By

Published : May 16, 2021, 12:32 PM IST

ಹೈದರಾಬಾದ್: ಏಪ್ರಿಲ್​ ತಿಂಗಳಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್​ ಹಾಕಿಸಿಕೊಂಡಿದ್ದ ಬಾಲಿವುಡ್​ ಮೆಗಾಸ್ಟಾರ್​ ಅಮಿತಾಬ್​ ಬಚ್ಚನ್​ ಇದೀಗ ಎರಡನೇ ಡೋಸ್​ ಪಡೆದುಕೊಂಡಿದ್ದಾರೆ.

ಈ ಬಗ್ಗೆ ತನ್ನ ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಾಕಿ ಮಾಹಿತಿ ಹಂಚಿಕೊಂಡಿದ್ದಾರೆ. "ಎರಡನೇ ಲಸಿಕೆಯೂ ಹಾಕಿಸಿಕೊಂಡಿದ್ದೇನೆ" ಎಂದು ಶೀರ್ಷಿಕೆಯನ್ನೂ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಕೊರೊನಾ ಲಸಿಕೆ ಹಾಕಿಸಿಕೊಂಡ ಬಿಗ್​ ಬಿ ಅಮಿತಾಬ್​ ಬಚ್ಚನ್​ ಮತ್ತು ಕುಟುಂಬ

ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಎರಡನೇ ಡೋಸ್ ಲಸಿಕೆ ತೆಗೆದುಕೊಳ್ಳುವ ಮೂಲಕ ಈದ್ ಆಚರಿಸಿಕೊಂಡಿದ್ದರು. ಇದೀಗ, ಅಮಿತಾನ್ ಬಚ್ಚನ್ ಕೂಡಾ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ಕೊರೊನಾಗೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ತುತ್ತಾಗಿದ್ದರು. ಕಂಗನಾ ರನೌತ್, ಅಮೀರ್ ಖಾನ್, ವಿಕ್ಕಿ ಕೌಶಲ್ ಮುಂತಾದವರು ಕೆಲವು ವಾರಗಳ ಹಿಂದೆ ಸೋಂಕಿಗೆ ತುತ್ತಾಗಿದ್ದರು.

ABOUT THE AUTHOR

...view details