ಮುಂಬೈ: ಬಾಲಿವುಡ್‌ನ ಹಿರಿಯ ನಟ ಅಮಿತಾಬ್ ಬಚ್ಚನ್ ಮತ್ತು ಪುತ್ರ ಅಭಿಷೇಕ್ ಬಚ್ಚನ್‌ಗೆ ಕೊರೊನಾ ಸೋಂಕು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬೆಳವಣಿಗೆಯ ನಂತರ ಅವರ ನಿವಾಸ ತಲುಪಿರುವ ಬಿಎಂಸಿ ಸಿಬ್ಬಂದಿ ವಾಸವಿದ್ದ ಬಂಗಲೆಯನ್ನು ಸೀಲ್ ಡೌನ್ ಮಾಡಿದ್ದು, ಸ್ಯಾನಿಟೈಸ್ ಪ್ರಕ್ರಿಯೆ ಶುರು ಮಾಡಿದ್ದಾರೆ.
ಬಿಗ್ ಬಿ ವಾಸವಿದ್ದ ಬಂಗಲೆ ಸೀಲ್‌ಡೌನ್; ಕಂಟೈನ್‌ಮೆಂಟ್ ಪ್ರದೇಶವೆಂದು ಘೋಷಣೆ - ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರ ಕೊರೊನಾ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನ (ಬಿಎಂಸಿ) ಪೌರ ಕಾರ್ಮಿಕರು ಅವರ ನಿವಾಸಕ್ಕೆ ಸ್ಯಾನಿಟೈಸ್ ಸಿಂಪಡಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಜೊತೆಗೆ ಅವರು ವಾಸವಿದ್ದ ಬಂಗಲೆಯನ್ನು ಸೀಲ್‌ಡೌನ್ ಮಾಡಿದ್ದು, ಸುತ್ತಮುತ್ತಲ ಪ್ರದೇಶವನ್ನು 'ನಿರ್ಬಂಧಿತ ವಲಯ'ವೆಂದು ಘೋಷಿಸಲಾಗಿದೆ.
ಬಿಗ್ ಬಿ, ಅಭಿಷೇಕ್ ಬಚ್ಚನ್‌ಗೆ ಕೊರೊನಾ: ಸ್ಯಾನಿಟೈಸರ್ ಮಾಡಲು ಜಲ್ಸಾ ತಲುಪಿದ ಬಿಎಂಸಿ ಅಧಿಕಾರಿಗಳು
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಂಡವು ನಗರದ ಜುಹು ಪ್ರದೇಶದಲ್ಲಿರುವ ಬಚ್ಚನ್ ಕುಟುಂಬದ ಅವಳಿ ಅಂತಸ್ತಿನ ಬಂಗಲೆ ಜಲ್ಸಾವನ್ನು ತಲುಪಿದೆ. ಜುಲೈ 11 ರಂದು ಅಮಿತಾಬ್ ಬಚ್ಚನ್ ಹಾಗೂ ಅವರಅವರ ಮಗ ಅಭಿಷೇಕ್ ಬಚ್ಚನ್ ಅವರಿಗೂ ಸೋಂಕು ದೃಢಪಟ್ಟಿದ್ದು ಸದ್ಯ ಆರೋಗ್ಯಸ್ಥಿರವಾಗಿದೆ ಎಂಬ ಮಾಹಿತಿ ದೊರೆತಿದೆ.
ಅಮಿತಾಬ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಯ ರೆಸ್ಪಿರೇಟರಿ ಐಸೊಲೇಶನ್ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated : Jul 12, 2020, 1:11 PM IST