ಟಾಲಿವುಡ್ ಮಿ. ಪಫೆಕ್ಟ್ ಪ್ರಭಾಸ್ ಸದ್ಯಕ್ಕೆ 'ಸಲಾರ್' ಹಾಗೂ 'ಆದಿಪುರುಷ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಎರಡೂ ಸಿನಿಮಾಗಳ ಚಿತ್ರೀಕರಣ ಆರಂಭವಾಗಿದ್ದು ಸಲಾರ್ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದರೆ ಆದಿಪುರುಷ್ 3 ಡಿ ಚಿತ್ರವನ್ನು ಭೂಷಣ್ ಕುಮಾರ್ ನಿರ್ಮಾಣದಲ್ಲಿ ಓಂ ರೌತ್ ನಿರ್ದೇಶಿಸುತ್ತಿದ್ದಾರೆ.
ಆ ವಿಶೇಷ ದಿನದಂದು ಅಭಿಮಾನಿಗಳಿಗೆ ಉಡುಗೊರೆ ನೀಡಲು ಮುಂದಾದ 'ರಾಧೇಶ್ಯಾಮ್' ತಂಡ - Pooja hegde starring Radhe Shyam
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ 'ರಾಧೇಶ್ಯಾಮ್' ಚಿತ್ರತಂಡ ಫೆಬ್ರವರಿ 14 ಪ್ರೇಮಿಗಳ ದಿನದಂದು ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಲು ಮುಂದಾಗಿದೆ. ಈ ವಿಚಾರವನ್ನು ಯುವಿ ಕ್ರಿಯೇಷನ್ಸ್ ಬ್ಯಾನರ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು ಆ ದಿನಕ್ಕಾಗಿ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ:ಅಮೆಜಾನ್ ಪ್ರೈಮ್ನ 'ಫ್ಯಾಮಿಲಿ ಮ್ಯಾನ್ 2' ರಿಲೀಸ್ ಮುಂದೂಡಿಕೆ
ಈ ಚಿತ್ರಗಳಿಗೂ ಮುನ್ನ ಪ್ರಭಾಸ್ 'ರಾಧೇಶ್ಯಾಮ್' ಚಿತ್ರದಲ್ಲಿ ನಟಿಸಿದ್ದು ಸಿನಿಮಾ ಏಪ್ರಿಲ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಫೆಬ್ರವರಿ 14 ರಂದು ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಹೊರಟಿದೆ. ಈ ವಿಚಾರವನ್ನು ಟಿ ಸೀರಿಸ್ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್ನಲ್ಲಿ ಪ್ರಕಟಿಸಿ ಪ್ರೀ ಟೀಸರ್ ತುಣುಕೊಂದನ್ನು ಹಂಚಿಕೊಂಡಿದೆ. ಬಹುಶ: ಆ ದಿನ ಟೀಸರ್ ಬಿಡುಗಡೆ ಮಾಡಬಹುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯೂರೋಪ್ನಲ್ಲಿ 1970 ರಲ್ಲಿ ನಡೆದ ಪ್ರೇಮಕಥೆಯೊಂದನ್ನು ಆಧರಿಸಿದ 'ರಾಧೇಶ್ಯಾಮ್' ಚಿತ್ರವನ್ನು ಮಾಡಲಾಗಿದೆ. ಜ್ಯೋತಿಷ್ಯ ಶಾಸ್ತ್ರ ಹಾಗೂ ವಿಜ್ಞಾನದ ನಡುವಿನ ಸಂಘರ್ಷವನ್ನು ಕೂಡಾ ಚಿತ್ರದಲ್ಲಿ ತೋರಿಸಲಾಗಿದೆಯಂತೆ. ಪ್ರಭಾಸ್ ಜೊತೆಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಭಾಸ್ ವಿಕ್ರಮಾದಿತ್ಯ ಹಾಗೂ ಪೂಜಾ ಹೆಗ್ಡೆ ಪ್ರೇರಣಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ರಾಧೇಶ್ಯಾಮ್ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ರಾಧಾ ಕೃಷ್ಣ ಕುಮಾರ್ ನಿರ್ದೇಶಿಸಿದ್ದಾರೆ.