ಹಿಂದಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ನ 15ನೇ ಸೀಸನ್ಗೆ ದಿನಗಣನೆ ಪ್ರಾರಂಭವಾಗಿದೆ. ಕಳೆದ ವರ್ಷ ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಬಿಗ್ ಬಾಸ್ ಶುರುವಾಗಿತ್ತು. ಈ ವರ್ಷ ಸಹ ದೇಶದಲ್ಲಿ ಅನ್ಲಾಕ್ ಪ್ರಕ್ರಿಯೆ ಶುರುವಾಗಿದ್ದು, ಮುಂದಿನ ತಿಂಗಳಿನಿಂದ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬಿಗ್ ಬಾಸ್ಗೆ 'NO' ಅಂದ್ರು ಭೂಮಿಕಾ ಚಾವ್ಲಾ: ಕಾರಣ ಇಲ್ಲಿದೆ
ಹಿಂದಿಯ ಬಿಗ್ ಬಾಸ್ನ 15ನೇ ಸೀಸನ್ಗೆ ದಿನಗಣನೆ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬ ಊಹಾಪೋಹ ಈಗಾಗಲೇ ಶುರುವಾಗಿದ್ದು, ನಟಿ ಭೂಮಿಕಾ ಚಾವ್ಲಾ ಹೆಸರು ಮೊದಲಿಗಿದೆ. ಆದರೆ ತಾನು ಭಾಗವಹಿಸುತ್ತಿಲ್ಲ ಎಂದು ನಟಿ ವಿಚಾರಕ್ಕೆ ತೆರೆ ಎಳೆದಿದ್ಧಾರೆ.
ಈ ಮಧ್ಯೆ, ಈ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ ಎಂಬ ಊಹಾಪೋಹ ಈಗಾಗಲೇ ಶುರುವಾಗಿದ್ದು, ಹಲವು ನಟ-ನಟಿಯರ ಹೆಸರುಗಳು ಕೇಳಿ ಬರುತ್ತಿವೆ. ಈ ಪೈಕಿ, ನಟಿ ಭೂಮಿಕಾ ಚಾವ್ಲಾ ಹೆಸರು ಮೊದಲಿಗಿದ್ದು, ಈ ಬಾರಿ ಅವರು ಪ್ರಮುಖ ಸ್ಪರ್ಧಿಯಾಗಿ ಬಿಗ್ ಬಾಸ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ವಿಷಯವನ್ನು ಭೂಮಿಕಾ ಚಾವ್ಲಾ ನಿರಾಕರಿಸಿದ್ದು, ಯಾವುದೇ ಕಾರಣಕ್ಕೂ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಗ್ ಬಾಸ್ನಲ್ಲಿ ನಾನು ಭಾಗವಹಿಸುತ್ತೇನೆ ಎಂಬ ಸುದ್ದಿ ಇಂದು, ನಿನ್ನೆಯದಲ್ಲ. ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ನಿಜ ಹೇಳಬೇಕೆಂದರೆ, ಆರಂಭದ ಮೂರು ಸೀಸನ್ಗಳಿಗೆ ನನಗೆ ಭಾಗವಹಿಸುವುದಕ್ಕೆ ಆಫರ್ ಬಂದಿತ್ತು. ಆದರೆ, ನಾನು ಒಪ್ಪಿರಲಿಲ್ಲ. ಈಗ ಆಫರ್ ಬಂದಿಲ್ಲ, ಬಂದರೂ ನನಗೆ ಹೋಗುವುದಕ್ಕೆ ಇಷ್ಟ ಇಲ್ಲ. ಏಕೆಂದರೆ, ನನಗೆ 24x7 ಕ್ಯಾಮೆರಾಗಳ ಎದುರು ಕಾಣಿಸಿಕೊಳ್ಳುವುದಕ್ಕೆ ಇಷ್ಟ ಇಲ್ಲ ಎಂದು ಹೇಳುವ ಮೂಲಕ ಬಿಗ್ ಬಾಸ್ಗೆ ಹೋಗುತ್ತಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಭೂಮಿಕಾ ಚಾವ್ಲಾ ಕನ್ನಡದಲ್ಲಿ ಗಾಡ್ಫಾದರ್ ಮತ್ತು ಲವ್ ಯೂ ಆಲಿಯಾ ಚಿತ್ರಗಳಲ್ಲಿ ಅಭಿನಯಿಸಿದ್ದರು.