ETV Bharat Karnataka

ಕರ್ನಾಟಕ

karnataka

ETV Bharat / sitara

ಲಾಕ್‌ಡೌನ್ ಟೈಮಲ್ಲಿ ಹೈಡ್ರೋಪೋನಿಕ್ ಕೃಷಿ ಕಲಿಯುತ್ತಿದ್ದಾರೆ ನಟಿ ಭೂಮಿ ಪಡ್ನೇಕರ್ - ನಟಿ ಭೂಮಿ ಪೆಡ್ನೇಕರ್

ಕೊರೊನಾ ಭೀತಿಯಿಂದ ಮನೆಯಲ್ಲಿರುವ ನಟಿ ಭೂಮಿ ಪೆಡ್ನೇಕರ್​​ ತಮ್ಮ ತಾಯಿಯೊಂದಿಗೆ ಹೈಡ್ರೋಪೋನಿಕ್​​ ಕೃಷಿ ಪದ್ಧತಿಯನ್ನು ಕಲಿಯುತ್ತಿದ್ದಾರೆ.

ನಟಿ ಭೂಮಿ ಪೆಡ್ನೇಕರ್
ನಟಿ ಭೂಮಿ ಪೆಡ್ನೇಕರ್
author img

By

Published : Apr 10, 2020, 7:03 PM IST

ಮುಂಬೈ: ನಟಿ ಭೂಮಿ ಪೆಡ್ನೇಕರ್​​ ಅವರು ತಮ್ಮ ತಾಯಿ ಸಮಿತ್ರಾ ಪೆಡ್ನೇಕರ್​​​ ಅವರೊಂದಿಗೆ ಹೈಡ್ರೋಪೋನಿಕ್​​ ಕೃಷಿಯನ್ನು ಕಲಿಯುತ್ತಿದ್ದಾರೆ. ಲಾಕ್​​ಡೌನ್​​ ಕಾರಣ ಮನೆಯಲ್ಲಿ ಟೇಬಲ್​ ಮೇಲೆ ಉದ್ಯಾನವನ್ನು ನಿರ್ಮಿಸುವ ಸಲುವಾಗಿ ಈ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದಾರೆ.

ಹೈಡ್ರೋಪೋನಿಕ್ಸ್ ಕೃಷಿಯನ್ನು ಅಭ್ಯಾಸ ಮಾಡುವ ಕಲ್ಪನೆಯ ಬಗ್ಗೆ ಮಾತನಾಡುತ್ತಾ, "ನನ್ನ ತಾಯಿ ಮತ್ತು ನಾನು ಯಾವಾಗಲೂ ನಮ್ಮದೇ ಆದ ಹೈಡ್ರೋಪೋನಿಕ್ಸ್ ಉದ್ಯಾನವನ್ನು ಹೊಂದಲು ಬಯಸುತ್ತೇವೆ. ನಮ್ಮ ಮನೆಗೆ ನಾವೇ ತರಕಾರಿ ಬೆಳೆಯುತ್ತೇವೆ. ಇದರಿಂದ ನಾವು ಸುಸ್ಥಿತ ಜೀವನಶೈಲಿ ಹೊಂದಬಹುದು ಎಂದು ಭೂಮಿ ಹೇಳುತ್ತಾರೆ.

in article image
ನಟಿ ಭೂಮಿ ಪೆಡ್ನೇಕರ್‌

ನಾನು ಹೈಡ್ರೋಪೋನಿಕ್ಸ್ ವಿಜ್ಞಾನವನ್ನು ಕಲಿಯುವುದರಿಂದ, ಪರಿಸರದ ಸಂರಕ್ಷಣೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕಾರಣವಾಗಿದೆ. ಈ ಸಮಯದಲ್ಲಿ ನಾನು ನನ್ನ ತಾಯಿಯೊಂದಿಗೆ ಮನೆಗೆಲಸ ಮಾಡುತ್ತಿದ್ದೇನೆ. ನಮ್ಮ ಉದ್ಯಾನವನದಲ್ಲಿ ವಾರದ ಎರಡು ದಿನಕ್ಕೆ ಬೇಕಾಗುವಷ್ಟು ತರಕಾರಿ ಉತ್ಪಾದಿಸುತ್ತೇವೆ ಎಂದರು.

ಸಸ್ಯಗಳನ್ನು ಮಣ್ಣಿನ ಹೊರತಾಗಿ ಮರಳು, ನೀರು ಮತ್ತು ಕೆಲವು ಪೋಷಕಾಂಶಗಳೊಂದಿಗೆ ಬೆಳೆಯುವುದನ್ನು ಹೈಡ್ರೋಫೋನಿಕ್ಸ್ ಎಂದು ಕರೆಯುತ್ತಾರೆ.

ABOUT THE AUTHOR

...view details