ಕರ್ನಾಟಕ

karnataka

ETV Bharat / sitara

ಬರ್ತಡೇ ಸಂಭ್ರಮದಲ್ಲಿ ಶ್ರೀಲೀಲಾ: ಶೂಟಿಂಗ್ ಸ್ಪಾಟ್​ನಲ್ಲಿ ಹುಟ್ಟುಹಬ್ಬ ಆಚರಣೆ - undefined

'ಕಿಸ್' ಚಿತ್ರದ ಮೂಲಕ ಸ್ಯಾಂಡಲ್​ವುಡ್​​ಗೆ ಕಾಲಿರಿಸಿದ ನಟಿ ಶ್ರೀಲೀಲಾಗೆ ಇಂದು ಬರ್ತಡೇ ಸಂಭ್ರಮ. ಸದ್ಯಕ್ಕೆ ಶ್ರೀಲೀಲಾ 'ಭರಾಟೆ' ಸಿನಿಮಾದಲ್ಲಿ ನಟಿಸುತ್ತಿದ್ದು, 'ಭರಾಟೆ' ಚಿತ್ರತಂಡ ಶೂಟಿಂಗ್ ಸ್ಪಾಟ್​ನಲ್ಲಿ ಶ್ರೀಲೀಲಾ ಬರ್ತಡೇ ಆಚರಿಸಿದೆ.

ಶ್ರೀಲೀಲಾ

By

Published : Jun 14, 2019, 5:47 PM IST

ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. 'ಭರ್ಜರಿ' ಸಿನಿಮಾ ಖ್ಯಾತಿಯ ಚೇತನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಸುಪ್ರೀತ್ ನಿರ್ಮಿಸುತ್ತಿದ್ದಾರೆ. ಮುರಳಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ.

ಶ್ರೀಲೀಲಾ ಬರ್ತಡೇ ಕೇಕ್​​​ಗಳು
ಶ್ರೀಲೀಲಾಗೆ ಕೇಕ್ ತಿನ್ನಿಸುತ್ತಿರುವ ನಿರ್ದೇಶಕ ಚೇತನ್
ಶ್ರೀಲೀಲಾ

ಶ್ರೀಲೀಲಾ 'ಕಿಸ್' ಸಿನಿಮಾ ಮೂಲಕ ಸ್ಯಾಂಡಲ್​​​​​​ವುಡ್​​​ನಲ್ಲಿ ಭರವಸೆ ಮೂಡಿಸಿದ ಗ್ಲ್ಯಾಮರ್ ನಟಿ. ಇಂದು ಈ ಬ್ಯೂಟಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ 'ಭರಾಟೆ' ಚಿತ್ರದ ಹ್ಯಾಂಗೋವರ್​​​​​​ನಲ್ಲಿರುವ ಶ್ರೀಲೀಲಾ ಬರ್ತಡೇಯನ್ನು ಚಿತ್ರತಂಡ ಆಚರಿಸಿದೆ. ಶ್ರೀಲೀಲಾ ಮೋಷನ್ ಪಿಕ್ಚರ್ ಜೊತೆಗೆ ಸಣ್ಣ ವಿಡಿಯೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಶ್ರೀಲೀಲಾ ಪೋಟೋಗಳು ಹಾಗೂ ಶೂಟಿಂಗ್​ ವೇಳೆ ತರ್ಲೆ, ತಮಾಷೆ ಮಾಡಿರುವ ದೃಶ್ಯಗಳಿವೆ. ಶ್ರೀಲೀಲಾ ಕೂಡಾ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ನಿರ್ದೇಶಕ ಚೇತನ್​, ನಿರ್ಮಾಪಕ ಸುಪ್ರೀತ್, 'ಅಯೋಗ್ಯ' ಸಿನಿಮಾ ನಿರ್ದೇಶಕ ಮಹೇಶ್ ಹಾಗೂ ಚಿತ್ರತಂಡದ ಇನ್ನಿತರರು ಹಾಜರಿದ್ದರು.

ಬರ್ತಡೇ ಗರ್ಲ್​ಗೆ ಗಿಫ್ಟ್​​
'ಭರ್ಜರಿ' ಶೂಟಿಂಗ್ ಸ್ಪಾಟ್​​​ನಲ್ಲಿ ಶ್ರೀಲೀಲಾ ಬರ್ತಡೇ ಆಚರಣೆ

For All Latest Updates

TAGGED:

ABOUT THE AUTHOR

...view details