ಕುಂದಾಪುರದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ತಯಾರಾಗಿರುವ ಸೈಕಲಾಜಿಕಲ್, ಥ್ರಿಲ್ಲರ್ ಕಥಾವಸ್ತು ಇರುವ 'ಭ್ರಮೆ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಶಿಕ್ಷಕರ ದಿನದಂದು ಈ ಟ್ರೇಲರ್ ಬಿಡುಗಡೆಯಾಗಿದ್ದು ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಹಾಗೂ ತಿಪಟೂರು ರಘು ಈ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ನವೆಂಬರ್ 1 ರಂದು ಈ ಸಿನಿಮಾ ನಮ್ಮ ಫ್ಲಿಕ್ಸ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಲಿದೆ. ಎಸ್.ಕೆ. ಭಗವಾನ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಪ್ರಾಂಶುಪಾಲರಾಗಿದ್ದಾಗ ನಟ ನವೀನ್ ರಘು ಹಾಗೂ ನಮ್ಮ ಫ್ಲಿಕ್ಸ್ ಮುಖ್ಯಸ್ಥ ವಿಜಯ್ ಪ್ರಕಾಶ್ ಅವರ ಬಳಿ ತರಬೇತಿ ಪಡೆದವರು. ಚಿತ್ರವನ್ನು ಚರಣ್ ರಾಜ್ ನಿರ್ದೇಶಿಸುತ್ತಿದ್ದು ನಾಯಕ ನವೀನ್ ರಘು ಸಹೋದರಿ ಮೀನ ರಘು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ ತಿಪಟೂರು ರಘು ವ್ಹೀಲ್ ಚೇರ್ನಲ್ಲಿ ಆಗಮಿಸಿದ್ದರು.
ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ , ತಿಪಟೂರು ರಘು
ಜೀವನದಲ್ಲಿ ಎಲ್ಲರಿಗೂ ಭ್ರಮೆ ಇರುತ್ತದೆ. ಆದರೆ ಅದು ಇತಿಮಿತಿಯಲ್ಲಿ ಇರುವುದು ಒಳ್ಳೆಯದು. ಭ್ರಮೆ ದಿಗ್ಭ್ರಮೆ ಆದರೆ ಜೀವನವೇ ಅಲ್ಲೋಲ ಕಲ್ಲೋಲವಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಹಾಸ್ಯ, ಸಾಹಸ, ಥ್ರಿಲ್ಲರ್ ಅಂಶಗಳೊಂದಿಗೆ ಲವ್ ಕೂಡಾ ಇರಲಿದೆಯಂತೆ. ನವೀನ್ ರಘು ಜೊತೆ ಅಂಜನ ಗೌಡ ಹಾಗೂ ಯಶೆನ ನಾಯಕಿಯರಾಗಿ ನಟಿಸುತ್ತಿದ್ದಾರೆ. ಮಜಾ ಟಾಕೀಸ್ ಖ್ಯಾತಿಯ ಪವನ್ ಚಿತ್ರದಲ್ಲಿ ಕಾಮಿಡಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ನವೀನ್ ರಘು ಜೊತೆ ಅಂಜನ ಗೌಡ ಹಾಗೂ ಯೆಶನ ನಾಯಕಿಯರು. ಕಾಮಿಡಿ ಪಾತ್ರವನ್ನು ಮಜಾ ಟಾಕೀಸ್ ಪವನ್ ನಿರ್ವಹಿಸಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್ ಚಿತ್ರದ ಹಾಡುಗಳನ್ನು ರಚಿಸಿ ಅವರೇ ರಾಗ ಸಂಯೋಜಿಸಿದ್ದಾರೆ.
ಕಾರ್ಯಕ್ರಮದಲ್ಲಿ 'ಭ್ರಮೆ' ಪೋಸ್ಟರನ್ನು ಗೀತಾ ಶೆಟ್ಟಿ ಹಾಗೂ ರಘು ಬಿಡುಗಡೆ ಮಾಡಿದರೆ ಸುಭಾಷ್ ಹಾಗೂ ಗಿರಿ ಕೂಪನ್ ಬಿಡುಗಡೆ ಮಾಡಿದರು. 99 ರೂಪಾಯಿ ಕೂಪನನ್ನು ಹಾಸ್ಯನಟ ಪವನ್ 500 ರೂಪಾಯಿ ನೀಡಿ ಖರೀದಿಸಿದರು. ಕಾರ್ಯಕ್ರಮದಲ್ಲಿ 23 ಪತ್ರಕರ್ತರಿಗೆ ನೀಡಿದ ಕೂಪನನ್ನು ಎಸ್.ಕೆ. ಭಗವಾನ್ ಲಕ್ಕಿಡಿಪ್ ಮೂಲಕ ತೆಗೆದರು. ಹಿರಿಯ ಸಿನಿಮಾ ಪತ್ರಕರ್ತೆ ಶ್ರೀಮತಿ ಸರಸ್ವತಿ ಜಾಗಿರ್ದಾರ್ ಲಕ್ಕಿ ಡಿಪ್ನಲ್ಲಿ ಒಂದು ಟ್ಯಾಬನ್ನು ಬಹುಮಾನವಾಗಿ ಪಡೆದರು.