ಕರ್ನಾಟಕ

karnataka

ETV Bharat / sitara

ಬಿಗ್‌ಬಾಸ್‌ ಭೂಮಿ ಶೆಟ್ಟಿ ಈಗ ಆ್ಯಂಕರ್: ಕಾರ್ಯಕ್ರಮ ಯಾವುದು ಗೊತ್ತಾ? - ಕನ್ನಡ ನಟಿ ಭೂಮಿ ಶೆಟ್ಟಿ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹಾಸ್ಯ ಕಾರ್ಯಕ್ರಮ 'ಮಜಾಭಾರತ'ದ ನಿರೂಪಕಿಯಾಗಿ ಭೂಮಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

Bhoomi Shetty is an anchor in the Majabharata
ಭೂಮಿ ಶೆಟ್ಟಿ

By

Published : Oct 21, 2020, 12:03 PM IST

ಕಿನ್ನರಿ ಧಾರಾವಾಹಿಯ ಮಣಿಯಾಗಿ ಕಿರುತೆರೆಗೆ ಕಾಲಿಟ್ಟ ಕುಂದಾಪುರದ ಕುವರಿ ಭೂಮಿ ಶೆಟ್ಟಿ ಇಂದು ರಾಯಲ್ ಶೆಟ್ರು ಆಗಿ ಪರಿಚಿತರಾಗಿದ್ದಾರೆ. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡ ಭೂಮಿ ಶೆಟ್ಟಿ ಟಾಪ್ 5 ನೇ ಸ್ಥಾನದಲ್ಲಿದ್ದರು. ಇನ್ನು 'ಇಕ್ಕಟ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿರುವ ಭೂಮಿ ಶೆಟ್ಟಿ, ಇದೀಗ ಮತ್ತೆ ಕಿರುತೆರೆಗೆ ಕಾಲಿಡಲಿದ್ದಾರೆ.

ಭೂಮಿ ಶೆಟ್ಟಿ

ಭೂಮಿ ಈ ಬಾರಿ ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ, ಬದಲಿಗೆ ನಿರೂಪಕಿಯಾಗಿ ಪರದೆ ಮೇಲೆ ಬರಲಿದ್ದಾರೆ. ಹೌದು, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹಾಸ್ಯ ಕಾರ್ಯಕ್ರಮ ಮಜಾಭಾರತದ ನಿರೂಪಕಿಯಾಗಿ ಇವರು ಕಾಣಿಸಿಕೊಳ್ಳಲಿದ್ದಾರೆ.

ಭೂಮಿ ಶೆಟ್ಟಿ

ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ತಮ್ಮ ನೆಚ್ಚಿನ ನಟಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ವೀಕ್ಷಕರು ಖುಷಿಯಾಗಿದ್ದಾರೆ. ಇಷ್ಟು ದಿನ ನಟಿಯಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದ ರಾಯಲ್ ಶೆಟ್ರು ಇದೀಗ ನಿರೂಪಕಿಯಾಗಿ ಮನರಂಜನೆ ನೀಡಲು ಬರುತ್ತಿದ್ದಾರೆ.

ಭೂಮಿ ಶೆಟ್ಟಿ

ABOUT THE AUTHOR

...view details