ಕರ್ನಾಟಕ

karnataka

ETV Bharat / sitara

ಬೆಳ್ಳಿತೆರೆಗೂ ಕಾಲಿಟ್ಟ ಕುಂದಾಪುರದ ಚೆಲುವೆ ಭೂಮಿಶೆಟ್ಟಿ - Kundapura girl Bhoomi shetty

'ಕಿನ್ನರಿ' , ಬಿಗ್​ಬಾಸ್ ಖ್ಯಾತಿಯ ಭೂಮಿಶೆಟ್ಟಿ ಕಿರುತೆರೆಯಿಂದ ಹಿರಿತೆರೆಗೆ ಪ್ರಮೋಷನ್ ಪಡೆದಿದ್ದಾರೆ. 'ಇಕ್ಕಟ್​' ಎಂಬ ಚಿತ್ರದಲ್ಲಿ ಭೂಮಿಶೆಟ್ಟಿ ನಟಿಸಿದ್ದು ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Bhoomi shetty in Big Screen
ಭೂಮಿಶೆಟ್ಟಿ

By

Published : Sep 17, 2020, 5:28 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ'ಕಿನ್ನರಿ' ಧಾರಾವಾಹಿಯಲ್ಲಿ ನಾಯಕಿ ಮಣಿಯಾಗಿ ಅಭಿನಯಿಸಿದ್ದ ಕುಂದಾಪುರದ ಹುಡುಗಿ ಭೂಮಿ ಶೆಟ್ಟಿ ಮೊದಲ ಧಾರಾವಾಹಿಯಲ್ಲೇ ಹೆಸರು ಮಾಡಿದವರು. ನಂತರ ಬಿಗ್​​​ಬಾಸ್​​ -7 ರಲ್ಲಿ ಕೂಡಾ ಭೂಮಿಶೆಟ್ಟಿ ಭಾಗವಹಿಸಿದ್ದರು.

ಭೂಮಿಶೆಟ್ಟಿ

ಬಿಗ್​​ಬಾಸ್​​​ನಲ್ಲಿ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಭೂಮಿ ಶೆಟ್ಟಿ, ಅಲ್ಲಿ ಇದ್ದ ದಿನಗಳಷ್ಟೂ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದರು. ಇದೀಗ ಸಣ್ಣ ಗ್ಯಾಪ್ ನಂತರ ಭೂಮಿ ಶೆಟ್ಟಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಕೊಂಚ ಬದಲಾವಣೆ ಎಂದರೆ ಭೂಮಿಶೆಟ್ಟಿ ಕಾಣಿಸುತ್ತಿರುವುದು ಧಾರಾವಾಹಿಗಳಲ್ಲಿ ಅಲ್ಲ, ಸಿನಿಮಾದಲ್ಲಿ. ಕಾಮಿಡಿ ಕಥಾಹಂದರವನ್ನು ಒಳಗೊಂಡ ಇಕ್ಕಟ್ಟು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಗೆ ಹಾರಿದ್ದಾರೆ ಭೂಮಿ ಶೆಟ್ಟಿ.‌ ಈ ಚಿತ್ರದ ಹೆಸರು 'ಇಕ್ಕಟ್'​​.

'ಕಿನ್ನರಿ' ಖ್ಯಾತಿಯ ನಟಿ

ಇಶಾಂ ಖಾನ್‌ ಮತ್ತು ಹಸೀನ್‌ ಖಾನ್ ನಿರ್ದೇಶನದ 'ಇಕ್ಕಟ್'​​​​​​​​​ ಸಿನಿಮಾ ಲಾಕ್ ಡೌನ್ ಸಮಯದಲ್ಲೇ ಶೂಟಿಂಗ್ ಮುಗಿಸಿದೆ. ನಾಗಭೂಷಣ್ ಈ ಚಿತ್ರದಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ನಾಗಭೂಷಣ್ ಈಗಾಗಲೇ ಸಂಕಷ್ಟಕರ ಗಣಪತಿ, ಒಂದಲ್ಲಾ ಎರಡಲ್ಲಾ, ಫ್ರೆಂಚ್ ಬಿರಿಯಾನಿ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತಾಗ ಸಂತೋಷದಿಂದಲೇ ಒಪ್ಪಿಕೊಂಡೆ. ಒಳ್ಳೆ ಸ್ಕ್ರಿಪ್ಟ್ ಮೂಲಕವೇ ಬೆಳ್ಳಿತೆರೆಗೆ ಬರುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಭೂಮಿ ಶೆಟ್ಟಿ ಹೇಳಿದ್ದಾರೆ.

ಬೆಳ್ಳಿತೆರೆಗೂ ಕಾಲಿಟ್ಟ ಭೂಮಿಶೆಟ್ಟಿ

ವಿಚ್ಛೇದನ ಪಡೆಯಬೇಕು ಎಂದುಕೊಂಡಿದ್ದ ದಂಪತಿಗಳು ಲಾಕ್​​ಡೌನ್ ಸಮಯದಲ್ಲಿ ಒಟ್ಟಿಗೆ ಇರಬೇಕಾದ ಸಂದರ್ಭ ಎದುರಾಗುತ್ತದೆ. ಅವರು ಜೊತೆಯಾಗಿರುವಾಗ ನಡೆಯುವ ಘಟನೆಗಳೇ ಸಿನಿಮಾದ ಕಥೆ. ಸಿನಿಮಾ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

'ಇಕ್ಕಟ್​' ಚಿತ್ರದಲ್ಲಿ ಭೂಮಿಶೆಟ್ಟಿ ನಟನೆ

ABOUT THE AUTHOR

...view details