ಕರ್ನಾಟಕ

karnataka

ETV Bharat / sitara

'ಆದಿಲಕ್ಷ್ಮಿ ಪುರಾಣ' ಚಿತ್ರದ ಭೂಮ್ ಭೂಮ್ ಲಿರಿಕಲ್ ಹಾಡು ಬಿಡುಗಡೆ - undefined

'ಆದಿಲಕ್ಷ್ಮಿ ಪುರಾಣ' ಸಿನಿಮಾದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. 'ಭೂಮ್ ಭೂಮ್' ಎಂಬ ಈ ಹಾಡನ್ನು ಸಂಜಿತ್ ಹೆಗ್ಡೆ, ಐಶ್ವರ್ಯ ರಂಗರಾಜನ್ ಹಾಗೂ ಪ್ರಜ್ವಲ್ ಜೈನ್ ಹಾಡಿದ್ದಾರೆ.

'ಆದಿಲಕ್ಷ್ಮಿ ಪುರಾಣ'

By

Published : Jun 30, 2019, 5:20 PM IST

ನಿರೂಪ್ ಭಂಡಾರಿ ಹಾಗೂ ರಾಧಿಕಾ ಪಂಡಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಆದಿಲಕ್ಷ್ಮಿ ಪುರಾಣ' ಸಿನಿಮಾದ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಚಿತ್ರತಂಡ ಸಿನಿಮಾದ ಆಡಿಯೋ ಬಿಡುಗಡೆ ಮಾಡಿತ್ತು.

'ಭೂಮ್ ಭೂಮ್ ಭೂಮಿಯು ಸುತ್ತಲು' ಎಂಬ ಸಾಹಿತ್ಯದಿಂದ ಆರಂಭವಾಗುವ ಈ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಂಜಿತ್ ಹೆಗ್ಡೆ, ಐಶ್ವರ್ಯ ರಂಗರಾಜನ್ ಹಾಗೂ ಪ್ರಜ್ವಲ್ ಜೈನ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಅನುಪ್ ಭಂಡಾರಿ ಈ ಹಾಡಿನ ಸಾಹಿತ್ಯ ಬರೆದಿದ್ದು, ಅವರೇ ಸಂಗೀತ ನಿರ್ದೇಶನ ಕೂಡಾ ಮಾಡಿದ್ದಾರೆ. ರಾಕ್​​ಲೈನ್ ಎಂಟರ್​​ಟೈನ್ಮೆಂಟ್ ಬ್ಯಾನರ್ ಅಡಿ ರಾಕ್​​​ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ರಿಯಾ. ವಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿರೂಪ್ ಜೊತೆಗೆ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

For All Latest Updates

TAGGED:

ABOUT THE AUTHOR

...view details