2017 ರಂದು ನಟಿ ಜಾಕಿ ಭಾವನಾ ಅಪಹರಣ ಕೇಸ್ಗೆ ಸಂಬಂಧಿಸಿದಂತೆ ಮಲಯಾಳಂ ನಟಿಯರನ್ನು ವಿಚಾರಣೆಗೆ ಹಾಜರಾಗಲು ಸುಪ್ರೀಂ ಕೋರ್ಟ್ ಸೂಚಿಸಿದೆ.
ನಟಿ ಭಾವನಾ ಅಪಹರಣ ಕೇಸ್...ಮಲಯಾಳಂ ನಟಿಯರ ವಿಚಾರಣೆ - Bhavana kidnap case in supreme court
ಜಾಕಿ ಭಾವನಾ ಅಪಹರಣ ಕೇಸ್ಗೆ ಸಂಬಂಧಿಸಿದಂತೆ ಭಾವನಾ ಅವರ ಆಪ್ತ ಗೆಳತಿಯರು, ಮಲಯಾಳಂ ನಟಿಯರೂ ಆದ ಇಬ್ಬರನ್ನು ಕೋರ್ಟ್ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.
ಭಾವನಾ ಅವರ ಕಿಡ್ನಾಪ್ ವಿಚಾರ ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಶಾಕ್ ಆಗಿದ್ದು ನಿಜ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ಅರೆಸ್ಟ್ ಆಗಿ 80 ದಿನಗಳ ಕಾಲ ಜೈಲುವಾಸ ಕೂಡಾ ಅನುಭವಿಸಿದರು. ಮೊದಲು ಪಲ್ಸರ್ ಸುನಿ ಹಾಗೂ ಹಾಗೂ 6 ವ್ಯಕ್ತಿಗಳನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈ ಘಟನೆ ಸುಪ್ರೀಂ ಕೋರ್ಟ್ವರೆಗೂ ಹೋಯ್ತು.
ಕೊರೊನಾ ವೈರಸ್ನಿಂದ ಬಹಳ ದಿನಗಳ ಕಾಲ ಸ್ಥಗಿತ ಆಗಿದ್ದ ಕೇಸ್ ಮೊನ್ನೆಯಷ್ಟೇ ರೀ ಓಪನ್ ಆಗಿದೆ. ಈ ವಿಚಾರವಾಗಿ ಖ್ಯಾತ ಮಲಯಾಲಂ ನಟಿ ಹಾಗೂ ಭಾವನಾ ಗೆಳತಿಯೊಬ್ಬರನ್ನು 3 ದಿನಗಳ ಕಾಲ ವಿಚಾರಣೆ ಮಾಡಲಾಗುವುದು. ನಂತರ ಮತ್ತೊಬ್ಬ ನಟಿ, ನಟ ಸಿದ್ದಿಕಿ ಲಾಲ್ ಹಾಗೂ ಭಾವನಾ ಸಹೋದರನನ್ನೂ ಕೂಡಾ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇನ್ನು 6 ತಿಂಗಳಲ್ಲಿ ಈ ಪ್ರಕರಣದ ವಿಚಾರಣೆಯನ್ನು ಮುಗಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.