ಪುನೀತ್ ರಾಜ್ಕುಮಾರ್ ಜೊತೆ 'ಜಾಕಿ' ಚಿತ್ರದಲ್ಲಿ ನಟಿಸಿರುವ ಭಾವನ ನಂತರ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದರು. ಮಲಯಾಳಂ ಚಿತ್ರಗಳ ಜೊತೆ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಈ ನಟಿ ಬೇಡಿಕೆ ಸ್ವಲ್ಪವೂ ಕಡಿಮೆಯಾಗಿಲ್ಲ.
ಮದುವೆಯಾದ್ರೂ ಅದೇ ಗ್ಲ್ಯಾಮರ್, ಅದೇ ಬೇಡಿಕೆ ಉಳಿಸಿಕೊಂಡಿರುವ ಭಾವನ - ಕಾರ್ತಿಕಾ ಮೆನನ್
ಮದುವೆಯಾದ ನಂತರ ಕೂಡಾ ಮೊದಲಿನಂತೆ ಬೇಡಿಕೆ ಉಳಿಸಿಕೊಂಡಿರುವ ನಟಿ ಭಾವನ ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಗಣೇಶ್ ಜೊತೆ 99 ಚಿತ್ರದ ನಂತರ ಇದೀಗ ಇನ್ಸ್ಪೆಕ್ಟರ್ ವಿಕ್ರಮ್, ಭಜರಂಗಿ 2, ಗೋವಿಂದ ಗೋವಿಂದ, ಶ್ರೀಕೃಷ್ಣ@ಜಿಮೈಲ್.ಕಾಮ್ ಚಿತ್ರಗಳಲ್ಲಿ ಭಾವನ ಬ್ಯುಸಿ ಇದ್ದಾರೆ.
ಭಾವನ ಮೂಲ ಹೆಸರು ಕಾರ್ತಿಕಾ ಮೆನನ್. ಮಲಯಾಳಂ ಹುಡುಗಿ ಈಗ ಕರ್ನಾಟಕದ ಸೊಸೆ. ಕನ್ನಡ ನಿರ್ಮಾಪಕ ನವೀನ್ ಅವರನ್ನು ಭಾವನ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು 2018 ರಲ್ಲಿ ಇಬ್ಬರೂ ಮದುವೆಯಾದರು. ಮದುವೆಯಾದ ನಂತರ ಕೂಡಾ ಭಾವನ ನಟಿಸುವುದನ್ನು ಬಿಡಲಿಲ್ಲ. ಕೆಲವು ದಿನಗಳ ಕಾಲ ರೆಸ್ಟ್ನಲ್ಲಿದ್ದು ಮತ್ತೆ 'ಟಗರು' ಚಿತ್ರದ ಮೂಲಕ ಆ್ಯಕ್ಟಿಂಗ್ ಆರಂಭಿಸಿದರು. ಮೊದಲಿನಷ್ಟೇ ಗ್ಲ್ಯಾಮರ್ ಹಾಗೂ ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ ಈ ನಟಿ. ಕೊರೊನಾ ಸಮಯದಲ್ಲಿ ಕೆಲವು ದಿನಗಳ ಕಾಲ ಕೇರಳದಲ್ಲಿ ನೆಲೆಸಿದ್ದ ಭಾವನ ಈಗ ಮತ್ತೆ ಬೆಂಗಳೂರಿಗೆ ವಾಪಸಾಗಿದ್ದಾರೆ. ಇತ್ತೀಚೆಗೆ ಕೆಲವೊಂದು ಸೆಲ್ಫಿಗಳನ್ನು ಕ್ಲಿಕ್ಕಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ ಭಾವನ.
ಮದುವೆ ನಂತರ 'ಟಗರು' ಹಾಗೂ ಗಣೇಶ್ ಜೊತೆ '99' ಚಿತ್ರಗಳಲ್ಲಿ ನಟಿಸಿದ್ದ ಭಾವನ ಈಗ ಇನ್ಸ್ಪೆಕ್ಟರ್ ವಿಕ್ರಮ್, ಭಜರಂಗಿ 2, ಗೋವಿಂದ ಗೋವಿಂದ, ಶ್ರೀಕೃಷ್ಣ@ಜಿಮೈಲ್.ಕಾಮ್ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.