ಬೆಂಗಳೂರು : ಸೂರ್ಯ-ಅಪರ್ಣಾ ಬಾಲಮುರಳಿ ನಟಿಸಿರುವ, ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಕಥೆ 'ಸೂರರೈ ಪೋಟ್ರು' ಚಿತ್ರ ನೋಡಿ ಮೆಚ್ಚಿ ಐ.ಪಿ.ಎಸ್ ಅಧಿಕಾರಿ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಬದುಕಿನ ಕುರಿತು ಮಾಡಿರುವ ಸಿನಿಮಾ 'ಸೂರರೈ ಪೋಟ್ರು'ಗೆ ದೊಡ್ಡಮಟ್ಟದ ಯಶಸ್ಸು ಸಿಕ್ಕಿದು. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಈ ಸಿನಿಮಾ ಓಟಿಟಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಎಲ್ಲರೂ ಮುಕ್ತಕಂಠದಿಂದ ಹೋಗಳುತ್ತಿದ್ದಾರೆ. ಈತ್ತಿಚೆಗೆ ಆಂತರಿಕ ಭದ್ರತಾ ಇಲಾಖೆಯ ಎಡಿಜಿಪಿ ಭಾಸ್ಕರ್ ರಾವ್ ಅವರು ಕೂಡ 'ಸೂರರೈ ಪೋಟ್ರು' ಸಿನಿಮಾವನ್ನು ನೋಡಿದ್ದು. ಜೊತೆಗೆ ತಮ್ಮ ಅಭಿಪ್ರಾಯವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸೂರ್ಯ ನಟನೆಯನ್ನು ಕೊಂಡಾಡಿರುವ ಭಾಸ್ಕರ್ ರಾವ್
'ಸೂರರೈ ಪೋಟ್ರು' ಚಿತ್ರದ ಹೀರೋ ಸೂರ್ಯ ನಟನೆಯನ್ನ ಬಹುವಾಗಿ ಮೆಚ್ಚಿಕೊಂಡಿದ್ದಾರೆ. 'ಗೋಪಿನಾಥ್ ಅವರ ಪಾತ್ರದಲ್ಲಿ ಸೂರ್ಯ ನಟನೆ ಅದ್ಭುತವಾಗಿದೆ, ಪರ್ಫಾಮೆನ್ಸ್ ಬಹಳ ಚೆನ್ನಾಗಿದೆ, ನಿರ್ದೇಶಕಿ ಸುಧಾ ಕೊಂಗರಾ ಅವರು ಅತ್ಯುತ್ತಮವಾದ ಕೆಲಸ ಮಾಡಿದ್ದಾರೆ. ಇಂತಹ ಒಬ್ಬ ಮಾದರಿಯ ವ್ಯಕ್ತಿಯ ಕಥೆಯನ್ನು ಇಡೀ ದೇಶ ಯುವ ಜನಾಂಗ ನೋಡಬೇಕು' ಎಂದು ಹೇಳಿದ್ದಾರೆ.
'ಕ್ಯಾಪ್ಟನ್ ಗೋಪಿನಾಥ್ ಅವರ 'ಸಿಂಪ್ಲಿ ಫೈ' ಕೃತಿಯನ್ನು ಆಧಾರಿಸಿ ಮಾಡಿರುವ 'ಸೂರರೈ ಪೋಟ್ರು' ಚಿತ್ರವನ್ನು ನಾನು ಕನ್ನಡದಲ್ಲಿ ನೋಡಿದೆ, ಅಸಾಧ್ಯವಾದ ಕನಸುಗಳನ್ನು ಹೇಗೆ ಸಾಕಾರಗೊಳಿಸಬಹುದು ಎಂಬುದನ್ನು ತಿಳಿಯಲು ಈ ಚಿತ್ರವನ್ನು ಯುವಜನಾಂಗ ನೋಡಬೇಕೆಂದು ನಾನು ಸಲಹೆ ನೀಡುತ್ತೇನೆ. ಪ್ರತಿಯೊಬ್ಬರಲ್ಲಿ ಅಗಾಧವಾದ ಶಕ್ತಿ ಇದೆ. ನಾಯಕತ್ವದ ಗುಣ ಇರುತ್ತದೆ' ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.