ಬೆಂಗಳೂರು:ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರವಾಗಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು ನಟ ಅನಿರುದ್ಧ್ ಡಾರ್ಲಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು.
ಸಿಎಂ ಭೇಟಿಯಾದ ಭಾರತಿ ವಿಷ್ಣುವರ್ಧನ್: ಶೀಘ್ರದಲ್ಲೇ ವಿಷ್ಣು ಸ್ಮಾರಕದ ಕೆಲಸ ಪ್ರಾರಂಭ - ವಿಷ್ಣು ಸ್ಮಾರಕದ ಅಡಿಪಾಯ ಕಾರ್ಯ
ಮೂರು ನಾಲ್ಕು ದಿವಸದಲ್ಲಿ ವಿಷ್ಣು ಸ್ಮಾರಕದ ಅಡಿಪಾಯ ಕಾರ್ಯ ಆರಂಭ ಮಾಡಲು ಸಿಎಂ ಭರವಸೆ ನೀಡಿದ್ದಾರೆ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದ್ರು.
ಭೇಟಿ ಬಳಿಕ ಮಾತಾನಾಡಿದ ಭಾರತಿ ವಿಷ್ಣುವರ್ಧನ್, ಮೂರು ನಾಲ್ಕು ದಿವಸಗಳಲ್ಲಿ ಅಡಿಪಾಯ ಕಾರ್ಯ ಆರಂಭ ಮಾಡಲು ಸಿಎಂ ಭರವಸೆ ನೀಡಿದ್ದಾರೆ. 30ನೇ ತಾರೀಖು ವಿಷ್ಣುವರ್ಧನ್ ಪುಣ್ಯ ಸ್ಮರಣೆ ಇದ್ದು, ಇದರ ಬಗ್ಗೆ ಕೇಳಿಕೊಂಡಿದ್ದೆವು. ಸಿಎಂ ಮೂರು ನಾಲ್ಕು ದಿವಸದಲ್ಲೇ ಕೆಲಸ ಆರಂಭಿಸುವ ಭರವಸೆ ನೀಡಿದ್ದಾರೆ. ಈಗಾಗಲೇ ಸ್ಮಾರಕ ಕಾರ್ಯ ಮೈಸೂರಿನಲ್ಲಿ ನಡೆಯುತ್ತಿದೆ.
ಸಿಎಂ ಯಡಿಯೂರಪ್ಪ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಷ್ಣುವರ್ಧನ್ ಬಗ್ಗೆ ಸಿಎಂ ಮೆಚ್ಚುಗೆ ಮಾತುಗಳನ್ನ ಆಡಿದ್ದಾರೆ. ವಿಷ್ಣುವರ್ಧನ್ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ ಎಂದರು.