ರೋರಿಂಗ್ ಸ್ಟಾರ್ ಶ್ರೀಮುರುಳಿ ಮತ್ತು ಶ್ರೀಲೀಲಾ ಅಭಿನಯದ ಮಾಸ್ ಎಂಟರ್ಟೈನಿಂಗ್ ಸಿನಿಮಾ ಭರಾಟೆ ಪ್ರಾರಂಭದಿಂದಲೂ ಹವಾ ಎಬ್ಬಿಸುತ್ತಲೇ ಬಂದಿದೆ. ಈಗಾಗ್ಲೇ ಸಿನಿಮಾದ ಕೆಲವು ಸಾಂಗ್ ಹಾಗೂ ಟ್ರೈಲರ್ಗಳು ಬಿಡುಗಡೆಯಾಗಿ ಸಿನಿ ಪ್ರಿಯರನ್ನು ಹುಚ್ಚೆಬ್ಬಿಸಿದ್ದವು. ಇದೀಗ ಭರಾಟೆ ಸಿನಿಮಾದ ಫುಲ್ ಟ್ರೈಲರ್ ರಿಲೀಸ್ ಆಗಿದ್ದು ಸಿನಿಮಾದ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಈ ಟ್ರೈಲರ್ನಲ್ಲಿ ಶ್ರೀಮುರುಳಿಯ ಗತ್ತು ಗಮ್ಮತ್ತು ಬಲು ಜೋರಾಗಿ ಕಾಣಿಸಿದೆ. ಹಲವು ರೀತಿಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಸಿನಿಮಾದಲ್ಲಿ ಮಾಸ್ ಡೈಲಾಗ್ ಮತ್ತು ಫೈಟಿಂಗ್ ಸೀನ್ಗಳಿಗೆ ಕೊರತೆ ಕಂಡು ಬಂದಿಲ್ಲ. 'ಹಾವಳಿ ದೀಪಾವಳಿ ಎರಡೂ ನನ್ ಕ್ಯಾರೆಕ್ಟರ್ನಲ್ಲೇ ಇದೆ. ಸಲಾಂ ಹೊಡೆಯೋ ಸೀನೇ ಇಲ್ಲ ಡಾರ್ಲಿಂಗ್, ಸುಮ್ನ್ ನುಗ್ತಾ ಇರೋದೆ, ತೊಡೆ ತಟ್ತಾ ಇರೋದೆ' ಎಂಬ ಡೈಲಾಗ್ ಮಾಸ್ ಅಭಿಮಾನಿಗಳಿಗೆ ರಸದೌತಣ ನೀಡುವಂತಿವೆ.