ಕರ್ನಾಟಕ

karnataka

ETV Bharat / sitara

ಭರ್ಜರಿ 50 ದಿನ‌ಗಳನ್ನು ಪೂರೈಸಿದ 'ಭರಾಟೆ': ಗಳಿಸಿದ್ದೆಷ್ಟು ಕೋಟಿ ಗೊತ್ತೇ? - 50 ದಿನಗಳನ್ನು ಪೂರೈಸಿದ ಭರಾಟೆ ಸಿನಿಮಾ

ಶ್ರೀಮುರಳಿ-ಶ್ರೀಲಿಲಾ ಕ್ಯೂಟ್ ಜೋಡಿ, ಫೈಟ್​​​​ಗಳು, ಪವರ್​​​​​ಫುಲ್ ಡೈಲಾಗ್ಸ್‌, ಸಂಗೀತ, ಛಾಯಾಗ್ರಹಣ ಎಲ್ಲವೂ ಸಿನಿಮಾದ ಪ್ಲಸ್ ಪಾಯಿಂಟ್​​ ಆಗಿದೆ.

Bharate completed 50 days successfully
ಭರ್ಜರಿ 50 ದಿನ‌ಗಳನ್ನು ಪೂರೈಸಿದ 'ಭರಾಟೆ'

By

Published : Dec 6, 2019, 5:28 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಚೇತನ್ ಕುಮಾರ್ ನಿರ್ದೇಶನದ 'ಭರಾಟೆ' ಸಿನಿಮಾ ಭರ್ಜರಿ ಐವತ್ತು ದಿನಗಳನ್ನು ಪೂರೈಸಿದೆ. ಈ ವರ್ಷದ ಫ್ಯಾಮಿಲಿ ಪ್ಯಾಕ್ ಎಂಟರ್​​​ಟೈನ್ಮೆಂಟ್​​​​ ಸಿನಿಮಾ ಆಗಿ ಹೊರಹೊಮ್ಮಿದ್ದ ಭರಾಟೆ ಈಗ 50 ದಿನಗಳನ್ನು ಪೂರೈಸಿದೆ.

100ನೇ ದಿನದತ್ತ ದಾಪುಗಾಲಿಟ್ಟಿರುವ ಭರಾಟೆ

ಬಹದ್ದೂರ್, ಭರ್ಜರಿ ಸಿನಿಮಾಗಳ ನಂತರ ನಿರ್ದೇಶಕ ಚೇತನ್ ಕುಮಾರ್ ಭರಾಟೆ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಟ್ರೇಲರ್​​​​​​​​​ ಮೂಲಕವೇ ಹೈ ಓಲ್ಟೇಜ್ ಸೃಷ್ಟಿಸಿದ್ದ 'ಭರಾಟೆ' ಸಿನಿಮಾ, ಬಿಡುಗಡೆಯಾದ ನಂತರವೂ ಅದೇ ಕ್ವಾಲಿಟಿಯಲ್ಲೇ 100ನೇ ದಿನದತ್ತ ಮುನ್ನುಗ್ಗುತ್ತಿದೆ. ಶ್ರೀಮುರಳಿ-ಶ್ರೀಲಿಲಾ ಕ್ಯೂಟ್ ಜೋಡಿ, ಫೈಟ್​​​​ಗಳು, ಪವರ್​​​​​ಫುಲ್ ಡೈಲಾಗ್​​​ಗಳು, ಸಂಗೀತ, ಛಾಯಾಗ್ರಹಣ ಎಲ್ಲವೂ ಸಿನಿಮಾದ ಪ್ಲಸ್ ಪಾಯಿಂಟ್​​ ಆಗಿದೆ. ಎಲ್ಲಾ ಎಲಿಮೆಂಟ್​​​ಗಳಿಂದಲೂ 'ಭರಾಟೆ' ಕಮಾಲ್ ಮಾಡಿದೆ.

ಶ್ರೀಮುರಳಿ, ಶ್ರೀಲೀಲಾ ಅಭಿನಯದ 'ಭರಾಟೆ'

ಉಗ್ರಂ, ರಥಾವರ, ಮಫ್ತಿ‌ ನಂತರ ಮತ್ತೆ ಸಕ್ಸಸ್​​​​​​ ಖುಷಿಯಲ್ಲಿರುವ ರೋರಿಂಗ್ ಸ್ಟಾರ್ , 'ಭರಾಟೆ' ಮೂಲಕ ಮತ್ತೊಂದು ಸೆಂಚುರಿ ಬಾರಿಸಲು ರೆಡಿಯಾಗಿದ್ದಾರೆ. ಸದ್ಯ 60 ಕ್ಕೂ ಹೆಚ್ಚು ಥಿಯೇಟರ್​​​​​​​​​ಗಳಲ್ಲಿ 50 ದಿನಗಳನ್ನು ಪೂರೈಸಿರುವ 'ಭರಾಟೆ', ಬಾಕ್ಸ್ ಆಫೀಸಿನಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಲಾಭ ಮಾಡಿ‌ ಮುನ್ನುಗುತ್ತಿದೆ. ಸ್ಯಾಟಲೈಟ್ ರೇಟ್ , ಹಿಂದಿ ಡಬ್ಬಿಂಗ್, ಅಮೆಜಾನ್ ಪ್ರೈಮ್, ಥಿಯೇಟರ್ ಶೇರ್ ಸೇರಿದಂತೆ ಬರೋಬ್ಬರಿ 25 ಕೋಟಿ ದೋಚಿರುವ ಸಿನಿಮಾ 100ನೇ ದಿನಗಳತ್ತ ದಾಪುಗಾಲಿಟ್ಟಿದೆ.

ABOUT THE AUTHOR

...view details