ಭರಾಟೆ ಸದ್ಯ ಸ್ಯಾಂಡಲ್ವುಡ್ಲ್ಲಿ ಸದ್ದು ಮಾಡುತ್ತಿರುವ ಚಿತ್ರ. ಅದ್ಧೂರಿ ಮೇಕಿಂಗ್, ಖಡಕ್ ಡೈಲಾಗ್ ಇರುವ ಟ್ರೈಲರ್ ನಿಂದಲೇ ಸೌಂಡ್ ಮಾಡ್ತಿರುವ ಸಿನಿಮಾ ಇದಾಗಿದೆ.
ರಿಲೀಸ್ಗೂ ಮುನ್ನವೇ ಭರಾಟೆಯ ಭರ್ಜರಿ ಸೌಂಡ್: ಭಾರಿ ಮೊತ್ತಕ್ಕೆ ಹಿಂದಿಗೆ ಡಬ್ಬಿಂಗ್ ರೈಟ್ಸ್ ಸೇಲ್ - undefined
ಸ್ಯಾಂಡಲ್ವುಡ್ನ ಮತ್ತೊಂದು ಚಿತ್ರ ಬಾಲಿವುಡ್ನಲ್ಲಿ ಸದ್ದು ಮಾಡಲು ಹೊರಟಿದೆ. ಶ್ರೀಮುರಳಿಯ ಭರಾಟೆ ಸಿನಿಮಾಗೆ ಭಾರಿ ಬೇಡಿಕೆ ಬಂದಿದೆ. ಈ ಚಿತ್ರದ ಡಬ್ಬಿಂಗ್ ರೈಟ್ಸ್ ಹಿಂದಿಗೆ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.
![ರಿಲೀಸ್ಗೂ ಮುನ್ನವೇ ಭರಾಟೆಯ ಭರ್ಜರಿ ಸೌಂಡ್: ಭಾರಿ ಮೊತ್ತಕ್ಕೆ ಹಿಂದಿಗೆ ಡಬ್ಬಿಂಗ್ ರೈಟ್ಸ್ ಸೇಲ್](https://etvbharatimages.akamaized.net/etvbharat/prod-images/768-512-3598109-thumbnail-3x2-muralijpg.jpg)
ಭರಾಟೆ
ಭರ್ಜರಿ ಹಾಗೂ ಬಹದ್ದೂರ್ ಸಿನಿಮಾಗಳ ನಂತ್ರ ನಿರ್ದೇಶಕ ಚೇತನ್ ಕುಮಾರ್ 'ಭರಾಟೆ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ನಟಿಸಿದ್ದಾರೆ. ಈ ಮಾಸ್ ಜೋಡಿ ಒಂದಾದಾಗಲೇ ಈ ಸಿನಿಮಾ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸುತ್ತೆ ಅಂತಾ ಗಾಂಧಿನಗರದ ಪಂಡಿತರು ಲೆಕ್ಕ ಹಾಕಿದ್ರು. ಅವರ ಲೆಕ್ಕ ಈಗ ಪಕ್ಕಾ ಆಗಿದ್ದು, ಭರಾಟೆ ಚಿತ್ರ ರಿಲೀಸ್ಗೂ ಮುನ್ನವೇ ಭರ್ಜರಿ ಸೌಂಡ್ ಶುರುಮಾಡಿದೆ. ಮೂಲಗಳ ಪ್ರಕಾರ ಈ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಬರೋಬ್ಬರಿ 5 ಕೋಟಿಗೆ ಸೇಲ್ ಆಗಿದೆಯಂತೆ.
Last Updated : Jun 19, 2019, 1:28 AM IST