ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹುಟ್ಟುಹಬ್ಬದಂದು ಅವರ ಅಭಿನಯದ 'ಭಜರಂಗಿ -2' ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಎ. ಹರ್ಷ ನಿರ್ದೇಶನದ 'ಭಜರಂಗಿ-2' ಸಿನಿಮಾ ಟೀಸರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.
ನೃತ್ಯ ನಿರ್ದೇಶಕ, ನಿರ್ದೇಶಕ ಎ. ಹರ್ಷ ಅವರಿಗೆ ಚಿತ್ರದ ಮೇಲೆ ಬಹಳ ನಿರೀಕ್ಷೆ ಇದೆ ಎನ್ನಲಾಗಿದೆ. ಸುಮಾರು 2:52 ನಿಮಿಷ ಅವಧಿಯ ಟೀಸರ್ ಇದುವರೆಗೂ 1.8 ಮಿಲಿಯನ್ ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೀಸರ್ನಲ್ಲಿ ಶಿವಣ್ಣ ಹೇಗೆ ಸ್ಟ್ರಾಂಗ್ ಎಂಟ್ರಿ ಕೊಟ್ಟಿದ್ದಾರೋ ಜಾಕಿ ಭಾವನಾ ಹಾಗೂ ಹಿರಿಯ ನಟಿ ಶ್ರುತಿ ಅವರಿಗೆ ಕೂಡಾ ಅಷ್ಟೇ ಸೂಪರ್ ಎಂಟ್ರಿ ನೀಡಲಾಗಿದೆ. ಟೀಸರ್ನಲ್ಲಿ ಶ್ರುತಿ ಚುಟ್ಟಾ ಸೇದುತ್ತಾ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆ ಭಜರಂಗಿ ಲೋಕಿ ಅಲಿಯಾಸ್ ಸೌರವ್ ವೈಟ್ ಅ್ಯಂಡ್ ವೈಟ್ನಲ್ಲಿ ಮಿಂಚಿದ್ದಾರೆ. ಹಿರಿಯ ನಟ ಕೆ.ಎಸ್. ಶ್ರೀಧರ್, ಸಿದ್ಲಿಂಗು ಶ್ರೀಧರ್ ಕಂಠದಾನ ಈ ಚಿತ್ರಕ್ಕೆ ಒಳ್ಳೆಯ ಪ್ಲಸ್ ಪಾಯಿಂಟ್ ಆಗಿದೆ.
ಭಜರಂಗಿ-2 ಚಿತ್ರದಲ್ಲಿ ಭಾವನಾ
ಚಿತ್ರದ ಟೀಸರ್ ನೋಡಿ ನಿರ್ಮಾಪಕ ಜಯಣ್ಣ ಭೊಗೇಂದ್ರ ಹಾಗೂ ನಿರ್ದೇಶಕ ಎ. ಹರ್ಷ ಅವರಿಗೆ ಅಭಿನಂದನೆಗಳ ಸುರಿಮಳೆ ಆಗುತ್ತಿದೆ. 2013 ರಲ್ಲಿ ‘ಭಜರಂಗಿ’ ಎ. ಹರ್ಷ ನಿರ್ದೇಶನದಲ್ಲಿ ಯಶಸ್ಸು ಪಡೆದ ಸಿನಿಮಾ. 7 ವರ್ಷಗಳ ಬಳಿಕ ಇದೇ ಹೆಸರಿನಲ್ಲಿ ಸೀಕ್ವೆಲ್ ತಯಾರಾದರೂ ಕಥಾವಸ್ತು ಹಾಗೂ ನಿರೂಪಣೆಯೇ ಬೇರೆ ಇರಲಿದೆ ಎನ್ನುತ್ತಾರೆ ಎ.ಹರ್ಷ.
'ಭಜರಂಗಿ 2' ಚಿತ್ರಕ್ಕೆ ಸ್ವಾಮಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಡಾ ವಿ. ನಾಗೇಂದ್ರ ಪ್ರಸಾದ್ ಗೀತರಚನೆ, ರವಿ ಸಂತೆಹೇಕ್ಳು ಕಲಾ ನಿರ್ದೇಶನ ಜೊತೆಯಾಗಿದೆ.