ಕರ್ನಾಟಕ

karnataka

ETV Bharat / sitara

ಮಾತಿನ ಮನೆ ಸೇರಿದ 'ಭೈರಾದೇವಿ'..ಏಪ್ರಿಲ್​​​​ನಲ್ಲಿ ಚಿತ್ರ ತೆರೆಗೆ - ಡಬ್ಬಿಂಗ್ ಹಂತದಲ್ಲಿ ಭೈರಾದೇವಿ

ಸತತ ಎರಡು ವರ್ಷಗಳಿಂದ ಚಿತ್ರಕ್ಕೆ ಕಠಿಣ ಪರಿಶ್ರಮ ಹಾಕಿ ಕೆಲಸ ಮಾಡುತ್ತಿರುವ ನಿರ್ದೇಶಕ ಶ್ರೀ ಜೈ ಕೊನೆಗೂ ಭೈರಾದೇವಿಯನ್ನು ಮಾತಿನ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಕ ಳೆದ ನಾಲ್ಕು ದಿನಗಳಿಂದ 'ಭೈರಾದೇವಿ' ಚಿತ್ರದ ಡಬ್ಬಿಂಗ್ ನಡೆಯುತ್ತಿದ್ದು ರಾಧಿಕಾ ಕುಮಾರಸ್ವಾಮಿಯ 'ಭೈರಾದೇವಿ' ಹಾಗೂ ಅಘೋರಿ ಪಾತ್ರಕ್ಕೆ ಗಾಯಕಿ ಎಂ.ಡಿ. ಪಲ್ಲವಿ ಡಬ್ಬಿಂಗ್ ಮಾಡಿದ್ದಾರೆ.

Bhairadevi
ಭೈರಾದೇವಿ

By

Published : Mar 4, 2020, 9:04 PM IST

ಸ್ಯಾಂಡಲ್​​​ವುಡ್​​​ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಭೈರಾದೇವಿ'. ಚಿತ್ರದಲ್ಲಿ ರಾಧಿಕಾ 'ಭೈರಾದೇವಿ' ಪಾತ್ರದಲ್ಲಿ‌ ಅಬ್ಬರಿಸಲು ರೆಡಿಯಾಗಿದ್ದು. ರಾಧಿಕಾ ಲುಕ್ ನೋಡಿ ಅಭಿಮಾನಿಗಳು ಫಿಧಾ ಆಗಿದ್ದಾರೆ.

'ಭೈರಾದೇವಿ' ಡಬ್ಬಿಂಗ್

ಸತತ ಎರಡು ವರ್ಷಗಳಿಂದ ಚಿತ್ರಕ್ಕೆ ಕಠಿಣ ಪರಿಶ್ರಮ ಹಾಕಿ ಕೆಲಸ ಮಾಡುತ್ತಿರುವ ನಿರ್ದೇಶಕ ಶ್ರೀ ಜೈ ಕೊನೆಗೂ ಭೈರಾದೇವಿಯನ್ನು ಮಾತಿನ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಕ ಳೆದ ನಾಲ್ಕು ದಿನಗಳಿಂದ 'ಭೈರಾದೇವಿ' ಚಿತ್ರದ ಡಬ್ಬಿಂಗ್ ನಡೆಯುತ್ತಿದ್ದು ರಾಧಿಕಾ ಕುಮಾರಸ್ವಾಮಿಯ 'ಭೈರಾದೇವಿ' ಹಾಗೂ ಅಘೋರಿ ಪಾತ್ರಕ್ಕೆ ಗಾಯಕಿ ಎಂ.ಡಿ. ಪಲ್ಲವಿ ಡಬ್ಬಿಂಗ್ ಮಾಡಿದ್ದಾರೆ. ಇನ್ನು ಈ ಚಿತ್ರಕ್ಕೆ ಸಂಗೀತ ಉಪಕರಣಗಳ ಮೂಲಕ ಲೈವ್​ ಡಬ್ಬಿಂಗ್ ಮಾಡುತ್ತಿರುವ ನಿರ್ದೇಶಕ ಶ್ರೀ ಜೈ ,ಏಪ್ರಿಲ್‌ನಲ್ಲಿ ಭೈರಾದೇವಿಯನ್ನು ತೆರೆಮೇಲೆ ತರಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಈ ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ನಿರ್ಮಿಸಿದ್ದು ಹಿರಿಯ ನಟ ರಮೇಶ್ ಅರವಿಂದ್ ಹಾಗೂ ರಾಧಾರಮಣ ಖ್ಯಾತಿಯ ಸ್ಕಂದ, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ.

ABOUT THE AUTHOR

...view details