ಕರ್ನಾಟಕ

karnataka

ETV Bharat / sitara

ಅಣ್ಣಾವ್ರ 'ಭಾಗ್ಯವಂತರು' ಚಿತ್ರವನ್ನ ರಿ ರಿಲೀಸ್​ ಮಾಡಲು ಮುಂದಾದ ಮುನಿರಾಜ್​​​ - rajkumar news

ಆಪರೇಷನ್ ಡೈಮಂಡ್ ರಾಕೆಟ್ ಹಳೆಯ ಸಿನಿಮಾವನ್ನ 13 ಲಕ್ಷ ರೂಪಾಯಿ ಖರ್ಚು ಮಾಡಿ ಡಿಟಿಎಸ್ ಹಾಗೂ ಕಲರ್ ಕರೆಕ್ಷನ್ ಮಾಡಿ ರಿಲೀಸ್ ಮಾಡಿದ್ರು. ಈ ಸಿನಿಮಾ ಕಲೆಕ್ಷನ್ ಮಾಡಿದ್ದು ಬರೋಬ್ಬರಿ ₹80 ಲಕ್ಷಕ್ಕೂ ಹೆಚ್ಚು ಅಂತಾರೆ ಮುನಿರಾಜ್​​​..

ಅಣ್ಣಾವ್ರ 'ಭಾಗ್ಯವಂತರು' ಚಿತ್ರವನ್ನ ರಿ ರಿಲೀಸ್​ ಮಾಡಲು ಮುಂದಾದ ಮುನಿರಾಜ್​​​
ಅಣ್ಣಾವ್ರ 'ಭಾಗ್ಯವಂತರು' ಚಿತ್ರವನ್ನ ರಿ ರಿಲೀಸ್​ ಮಾಡಲು ಮುಂದಾದ ಮುನಿರಾಜ್​​​

By

Published : Jan 19, 2021, 7:59 PM IST

ಡಾ. ರಾಜ್‌ಕುಮಾರ್ ಅಪ್ಪಟ ಅಭಿಮಾನಿ ಹಾಗೂ ಸಿನಿಮಾ ವಿತರಕನಾಗಿರುವ ಮುನಿರಾಜ್ ಕಳೆದ 45 ವರ್ಷಗಳಿಂದ ಡಾ. ರಾಜ್ ಕುಮಾರ್ ಕೆಲ ಸಿನಿಮಾಗಳನ್ನ ರಿ ರಿಲೀಸ್ ಮಾಡುತ್ತಿದ್ದಾರೆ. ಇದೀಗ ಭಾಗ್ಯವಂತರು ಸಿನಿಮಾವನ್ನು ರಿ ರಿಲೀಸ್​​ ಮಾಡಲು ನಿರ್ಧರಿಸಿದ್ದಾರೆ.

ರಾಜ್​ಕುಮಾರ್​​ ಮತ್ತು ಪಾರ್ವತಮ್ಮ

ಆಪರೇಷನ್ ಡೈಮಂಡ್ ರಾಕೆಟ್, ರಾಜ ನನ್ನ ರಾಜ, ನಾನೊಬ್ಬ ಕಳ್ಳ ಸಿನಿಮಾಗಳನ್ನ ತೆಗೆದುಕೊಂಡು, ಹೊಸ ತಂತ್ರಜ್ಞಾನದಲ್ಲಿ ಅಂದ್ರೆ ಸಿನಿಮಾಸ್ಕೋಪ್ 7.1 ಮತ್ತು ಡಿಐ ಅಳವಡಿಸಿ ಕಲರ್ ಕರೆಕ್ಷನ್ ಮಾಡಿಸಿ ಮರು ಬಿಡುಗಡೆ ಮಾಡಿ ತೆರೆ ಮೇಲೆ ತರುತ್ತಿದ್ದಾರೆ.

ರಾಜ್​ಕುಮಾರ್​​ ಮತ್ತು ಪಾರ್ವತಮ್ಮ

ಆಪರೇಷನ್ ಡೈಮಂಡ್ ರಾಕೆಟ್ ಹಳೆಯ ಸಿನಿಮಾವನ್ನ 13 ಲಕ್ಷ ರೂಪಾಯಿ ಖರ್ಚು ಮಾಡಿ ಡಿಟಿಎಸ್ ಹಾಗೂ ಕಲರ್ ಕರೆಕ್ಷನ್ ಮಾಡಿ ರಿಲೀಸ್ ಮಾಡಿದ್ರು. ಈ ಸಿನಿಮಾ ಕಲೆಕ್ಷನ್ ಮಾಡಿದ್ದು ಬರೋಬ್ಬರಿ ₹80 ಲಕ್ಷಕ್ಕೂ ಹೆಚ್ಚು ಅಂತಾರೆ ಮುನಿರಾಜ್​​​.

ಮುಂದಿನ ದಿನಗಳಲ್ಲಿ ನಿರ್ಮಾಪಕ ಮುನಿರಾಜ್​​​, ಹುಲಿ ಹಾಲಿನ ಮೇವು, ಬಹದ್ದೂರ್​​ ಗಂಡು, ಪ್ರೇಮದ ಕಾಣಿಕೆ ಸಿನಿಮಾಗಳನ್ನು ತೆರೆ ಮೇಲೆ ತರುತ್ತಿದ್ದಾರಂತೆ.

ಅಣ್ಣಾವ್ರ 'ಭಾಗ್ಯವಂತರು' ಚಿತ್ರವನ್ನ ರಿ ರಿಲೀಸ್​ ಮಾಡಲು ಮುಂದಾದ ಮುನಿರಾಜ್..​​​

ABOUT THE AUTHOR

...view details