ಕನ್ನಡದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತು ‘ಕ್ರಾಂತಿವೀರ’ ಸಿನಿಮಾ ತಯಾರಾಗುತ್ತಿದೆ. ಅದರಲ್ಲಿ ಅಜಿತ್ ಜಯರಾಜ್ ಭಗತ್ ಸಿಂಗ್ ಪಾತ್ರ ನಿರ್ವಹಿಸಿದ್ದಾರೆ. ಆದರೆ ಬಾಲಕ ಭಗತ್ ಸಿಂಗ್ ಪಾತ್ರ ಯಾರು ಮಾಡುತ್ತಾರೆ ಎಂಬುದನ್ನು ಗೌಪ್ಯವಾಗಿ ಇಡಲಾಗಿತ್ತು. ಬಾಲಕ ಭಗತ್ ಸಿಂಗ್ ಪಾತ್ರ ಕೆಲವು ನಿಮಿಷ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಬಾಲಕ ಭಗತ್ ಸಿಂಗ್ ಪೋಸ್ಟರ್ಅನ್ನು ದಸರಾ ಉತ್ಸವದ ಸಮಯದಲ್ಲಿ ಬಿಡುಗಡೆ ಮಾಡಲಾಗಿದೆ.
ಮಾಸ್ಟರ್ ನಿಶಾಂತ್ ಟಿ. ರಾಥೋಡ್ ಈ ‘ಕ್ರಾಂತಿವೀರ’ ಸಿನಿಮಾದಲ್ಲಿ ಬಾಲಕ ಭಗತ್ ಸಿಂಗ್ ಪಾತ್ರ ಮಾಡುತ್ತಿದ್ದಾನೆ. ಇಂದು ಮಾಸ್ಟರ್ ನಿಶಾಂತ್ ಟಿ. ರಾಥೋಡ್ ಹುಟ್ಟುಹಬ್ಬ. ಅದಕ್ಕಾಗಿ ಈ ಬಾಲಕನ ಭಗತ್ ಸಿಂಗ್ ಗೆಟಪ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಮಾಸ್ಟರ್ ನಿಶಾಂತ್ ರಾಥೋಡ್ ಈ ಹಿಂದೆ ಬಾಲ ನಟನಾಗಿ ‘ಮೂಕ ಹಕ್ಕಿ’ ಹಾಗೂ ‘ಬೆಟ್ಟದ ದಾರಿ’ ಸಿನಿಮಾಗಳಲ್ಲಿ ನಟಿಸಿದ್ದಾನೆ.