ಕರ್ನಾಟಕ

karnataka

ಅಟ್ಲಾಂಟ ಚಿತ್ರೋತ್ಸವದಲ್ಲಿ ಪ್ರಶಸ್ತಿ ಬಾಚಿಕೊಂಡ 'ಅಮೃತಮತಿ'

By

Published : Jan 28, 2021, 2:05 AM IST

ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ' ಚಿತ್ರವು ಅಮೆರಿಕದ ಅಟ್ಲಾಂಟ ಪ್ರಶಸ್ತಿ ಅರ್ಹತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶಿ ಭಾಷಾಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

best-foreign-language-film-award-for-amritamati-movie
ಅಟ್ಲಾಂಟ ಚಿತ್ರೋತ್ಸವ

ಸ್ಯಾಂಡಲ್​ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಅಭಿನಯದ ಹಾಗೂ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ' ಸಿನಿಮಾಗೆ ಅಮೆರಿಕದ ಅಟ್ಲಾಂಟ ಪ್ರಶಸ್ತಿ ಅರ್ಹತಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ವಿದೇಶಿ ಭಾಷಾಚಿತ್ರ ಪ್ರಶಸ್ತಿ ದೊರೆತಿದೆ.

ಅದೆಷ್ಟೋ ಇಂಗ್ಲೀಷ್​ ಸಿನಿಮಾಗಳ ಜೊತೆ ಸ್ಪರ್ಧಿಸಿ, ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿಯನ್ನ 'ಅಮೃತಮತಿ' ಪಡೆದುಕೊಂಡಿದೆ. 13ನೇ ಶತಮಾನದ ಜನ್ನ ಕವಿಯ ಯಶೋಧರ ಚರಿತೆಯನ್ನ ಆಧರಿಸಿ ಮಾಡಿರುವ ಚಿತ್ರ ಇದಾಗಿದೆ. ಅಮೃತಮತಿ ಪಾತ್ರದಲ್ಲಿ ನಟಿ ಹರಿಪ್ರಿಯ ಕಾಣಿಸಿಕೊಂಡಿದ್ದು, ಈಗಾಗಲೇ ನೊಯ್ಡಾ ವಿಶ್ವ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು.

ಪ್ರಶಸ್ತಿ ಬಾಚಿಕೊಂಡ 'ಅಮೃತಮತಿ'

ಯಶೋಧರನ ಪಾತ್ರದಲ್ಲಿ ನಟ ಕಿಶೋರ್​ ನಟಿಸಿದ್ದು, ಸುಂದರ್​ರಾಜ್​, ಪ್ರಮೀಳಾ ಜೋಷಾಯ್​, ತಿಲಕ್​, ಸುಪ್ರಿಯಾ ರಾವ್, ವತ್ಸಲಾ ಮೋಹನ್​, ಅಂಬರೀಶ್​ ಸಾರಂಗಿ, ಭೂಮಿಕಾ ಲಕ್ಷ್ಮೀನಾರಾಯಣ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅಮೃತಮತಿಗೆ ಸಂಕಲನಕಾರರಾಗಿ ಸುರೇಶ್​ ಅರಸು, ಛಾಯಾಗ್ರಾಹಕರಾಗಿ ನಾಗರಾಜ ಆದವಾನಿ, ಸಂಗೀತ ನಿರ್ದೇಶಕರಾಗಿ ಗಾಯಕಿ ಶಮಿತಾ ಮಲ್ನಾಡ್​, ನೃತ್ಯ ಸಂಯೋಜಕರಾಗಿ ತ್ರಿಭುವನ್​ ಹಾಗೂ ಕಲಾ ನಿರ್ದೇಶಕರಾಗಿ ರಮೇಶ್​ ಚಂದ್ರ ಕೆಲಸ ಮಾಡಿದ್ದಾರೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್​​ ಬ್ಯಾನರ್​ನಡಿ ಪುಟ್ಟಣ್ಣ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ABOUT THE AUTHOR

...view details