ಬೆಂಗಳೂರು ಮೈಲ್, ಬೆಂಗಳೂರು ಡೇಸ್ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ತಯಾರಾಗಿವೆ. ಇದೀಗ ವಿಭಿನ್ನ ಕಥಾಹಂದರವುಳ್ಳ ಸಸ್ಪೆನ್ಸ್, ಥ್ರಿಲ್ಲರ್ 'ಬೆಂಗಳೂರು 69' ಸಿನಿಮಾ ತಯಾರಾಗಿ ಬಿಡುಗಡೆಗೆ ಕಾಯುತ್ತಿದೆ.
ಟ್ರಿಪಲ್ ಎ ಸಿನಿಮಾಸ್ ಬ್ಯಾನರ್ ಅಡಿ ಝಾಕೀರ್ ಹುಸೇನ್ ಕರೀಂ ಖಾನ್ ಹಾಗೂ ಅವರ ಪತ್ನಿ ಗುಲ್ಜಾರ್ ನಿರ್ಮಾಣದಲ್ಲಿ ಕ್ರಾಂತಿ ಚೈತನ್ಯ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಸದ್ಯಕ್ಕೆ ಸೆನ್ಸಾರ್ ಅಂಗಳದಲ್ಲಿದೆ. ಕೊರೊನಾ ಭೀತಿ ಕಡಿಮೆಯಾಗುತ್ತಿದ್ದಂತೆ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಝಾಕೀರ್ ಹುಸೇನ್ ಕರೀಂ ಖಾನ್ ಹೇಳಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಹಳ ಕುತೂಹಲ ಹುಟ್ಟುಹಾಕಿದೆ.
ಚಿತ್ರದಲ್ಲಿ ಅನಿತಾ ಭಟ್ ಹಾಗೂ ಪವನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅನಿತಾ ಭಟ್ ಅವರನ್ನು ಈ ಚಿತ್ರದಲ್ಲಿ ಬಹಳ ಹಾಟ್ ಆಗಿ ತೋರಿಸಲಾಗಿದೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಮೊದಲ ಬಾರಿಗೆ ಯೂರೋಪ್ನ ಖ್ಯಾತ ಮಾಡೆಲ್, ಬೆಲ್ಲಿ ಡ್ಯಾನ್ಸರ್ ಗ್ರೆಸಿಲ್ಲಾ ಪಿಶ್ಚನರ್ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಚಿತ್ರದ ಕೆಲವೊಂದು ಸನ್ನಿವೇಶಗಳನ್ನು ಇದುವರೆಗೂ ಯಾರೂ ಮಾಡಿರದಂತ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.
ಯೂರೋಪ್ ಬೆಲ್ಲಿ ಡ್ಯಾನ್ಸರ್ ಗ್ರೆಸಿಲ್ಲಾ ದುಬೈನ ಬುರ್ಜ್ ಕಲೀಫಾ, ಶಾರ್ಜಾ ಮರುಭೂಮಿ, ಬೆಂಗಳೂರು ಸುತ್ತ ಮುತ್ತ ಕೂಡಾ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ದಕ್ಷಿಣ ಆಫ್ರಿಕಾ ತಂತ್ರಜ್ಞರು ಇರುವುದು ಕೂಡಾ ವಿಶೇಷ. ಕನ್ನಡ, ತೆಲುಗು, ಹಿಂದಿ ಮೂರೂ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ ಹಲವಾರು ವಿಶೇಷತೆಗಳಿಂದ ಕೂಡಿರುವ ಸಿನಿಮಾವನ್ನು ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.