ಕರ್ನಾಟಕ

karnataka

ETV Bharat / sitara

Video : ಏತಕೇ.. ಬೊಗಸೆ ತುಂಬ ಆಸೆ ನೀಡುವ ಹಾಡಿನ ರೀತಿ ಪ್ರೀ ವೆಡ್ಡಿಂಗ್​ ಶೂಟ್​ - Bellbottom Song style Pre Wedding Shoot

ಬೆಲ್​ ಬಾಟಮ್​​ ಸಿನಿಮಾದ ಏತಕೇ ಬೊಗಸೆ ತುಂಬ ಆಸೆ ನೀಡುವೆ ಹಾಡು ಎಷ್ಟು ವೈರಲ್ ಆಗಿದೆ ಅಂದ್ರೆ ಹೊಸದಾಗಿ ಮದುವೆ ಆಗುವ ಜೋಡಿಯೊಂದು ಏತಕೇ ಬೊಗಸೆ ತುಂಬ ಆಸೆ ನೀಡುವೆ ಹಾಡಿನ ಪಿಕ್ಚರೈಜೇಶನ್ ರೀತಿಯಲ್ಲೇ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿ ಗಮನ ಸೆಳೆದಿದೆ.

Bellbottom Song style Pre Wedding Shoot
Video : ಏತಕೇ.. ಬೊಗಸೆ ತುಂಬ ಆಸೆ ನಿಡುವ ಹಾಡಿನ ರೀತಿ ಪ್ರೀ ವೆಡ್ಡಿಂಗ್​ ಶೂಟ್​

By

Published : Feb 22, 2020, 10:22 PM IST

ಬೆಲ್ ಬಾಟಮ್ 2019ರ ಸೂಪರ್ ಹಿಟ್ ಚಿತ್ರ. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಅಲ್ಲದೇ ತೆಲುಗು ತಮಿಳಿಗೂ ಈ ಚಿತ್ರ ಹಾರಿತು. ಇನ್ನು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ ಕಾಂಬಿನೇಷನ್ ಸಿನಿಪ್ರಿಯರಿಗೆ ಸಖತ್ತಾಗಿ ಕಿಕ್ ಕೊಟ್ಟಿತ್ತು. ಅದರಲ್ಲೂ ಏತಕೇ ಬೊಗಸೆ ತುಂಬ ಆಸೆ ನೀಡುವೇ ಸಾಂಗ್ ಒಳ್ಳೆ ಮೈಲೇಜ್ ಕೊಟ್ಟಿತು.

ಏತಕೇ.. ಬೊಗಸೆ ತುಂಬ ಆಸೆ ನಿಡುವ ಹಾಡಿನ ರೀತಿ ಪ್ರೀ ವೆಡ್ಡಿಂಗ್​ ಶೂಟ್​

ಈ ಹಾಡು ಡಬ್ ಸ್ಮಾಶ್, ಟಿಕ್ ಟಾಕ್​ನಲ್ಲೂ ವೈರಲ್ ಆಗಿತ್ತು. ವಿಶೇಷ ಅಂದ್ರೆ ಈ ಹಾಡು ಬಂದು ವರ್ಷ ಕಳೆದ್ರೂ ಕೂಡ ಇನ್ನೂ ಹಾಡಿನ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಹೌದು ಈ ಹಾಡು ಎಷ್ಟು ವೈರಲ್ ಆಗಿದೆ ಅಂದ್ರೆ ಹೊಸದಾಗಿ ಮದುವೆ ಆಗುವ ಜೋಡಿಯೊಂದು ಏತಕೇ ಬೊಗಸೆ ತುಂಬ ಆಸೆ ನೀಡುವೆ ಹಾಡಿನ ಪಿಕ್ಚರೈಜೇಶನ್ ರೀತಿಯಲ್ಲೇ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿ ಗಮನ ಸೆಳೆದಿದೆ.

ವಿಶೇಷ ಅಂದ್ರೆ ಈ ಜೋಡಿ ಬೆಲ್ ಬಾಟಮ್ ಹಾಡಿನ ಶೈಲಿಯಲ್ಲೇ ರೆಟ್ರೋ ಲುಕ್​​ನಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅದ್ರೆ ಈ ಜೋಡಿ ಯಾರು ಎಲ್ಲಿಯವರು ಅವರ ಹೆಸರೇನು ಎಂಬುದು ಮಾತ್ರ ತಿಳಿದಿಲ್ಲ.

For All Latest Updates

TAGGED:

ABOUT THE AUTHOR

...view details