ಜಯತೀರ್ಥ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯಾ ನಟಿಸಿರುವ 'ಬೆಲ್ಬಾಟಮ್' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಸಾಲಿಗೆ ಸೇರಿರುವ ಸಿನಿಮಾ. ಈ ಸಿನಿಮಾ ಮೂಲಕ ರಿಷಭ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದು, ನಿರ್ದೇಶಕ ಮಾತ್ರವಲ್ಲ ಒಳ್ಳೆಯ ನಟ ಎಂದು ಕೂಡಾ ಪ್ರೂವ್ ಮಾಡಿದ್ದರು.
ರಿಷಭ್ ಶೆಟ್ಟಿಯ 'ಬೆಲ್ಬಾಟಮ್' ತೊಡುತ್ತಿರುವ ಟಾಲಿವುಡ್, ಬಾಲಿವುಡ್ ನಟರು - ತೆಲುಗು ಬೆಲ್ಬಾಟಮ್ಗೆ ನಾಣಿ ನಾಯಕ
'ಬೆಲ್ಬಾಟಮ್' ಚಿತ್ರವನ್ನು ತೆಲುಗು ಹಾಗೂ ಹಿಂದಿಗೆ ಸಾಹಸ ನಿರ್ದೇಶಕ ರವಿವರ್ಮ ರಿಮೇಕ್ ರೈಟ್ಸ್ ಖರೀದಿಸಿದ್ದು, ರಿಷಭ್ ಶೆಟ್ಟಿ ನಿಭಾಯಿಸಿದ್ದ ಡಿಟೆಕ್ಟಿವ್ ದಿವಾಕರನ ಪಾತ್ರವನ್ನು ತೆಲುಗಿನಲ್ಲಿ ನಾಣಿ ಹಾಗೂ ಹಿಂದಿಯಲ್ಲಿ ಆಯುಷ್ಮಾನ್ ಖುರಾನ ಮಾಡುತ್ತಿದ್ದಾರೆ.

ಇದೀಗ ಈ ಸಿನಿಮಾ ತೆಲುಗು ಹಾಗೂ ಹಿಂದಿ ಎರಡೂ ಭಾಷೆಗಳಿಗೂ ರಿಮೇಕ್ ಆಗುತ್ತಿದೆ. ಈ ಚಿತ್ರವನ್ನು ತೆಲುಗು ಹಾಗೂ ಹಿಂದಿಗೆ ಸಾಹಸ ನಿರ್ದೇಶಕ ರವಿವರ್ಮ ರಿಮೇಕ್ ರೈಟ್ಸ್ ಖರೀದಿಸಿದ್ದು, ರಿಷಭ್ ಶೆಟ್ಟಿ ನಿಭಾಯಿಸಿದ್ದ ಡಿಟೆಕ್ಟಿವ್ ದಿವಾಕರನ ಪಾತ್ರವನ್ನು ತೆಲುಗಿನಲ್ಲಿ ನಾಣಿ ಹಾಗೂ ಹಿಂದಿಯಲ್ಲಿ ಆಯುಷ್ಮಾನ್ ಖುರಾನ ಮಾಡುತ್ತಿದ್ದಾರೆ. ಈಗಾಗಲೇ ಈ ಇಬ್ಬರೂ ನಟರೊಂದಿಗೆ ರವಿವರ್ಮ ಮಾತುಕತೆ ನಡೆಸಿದ್ದು ಬಹುತೇಕ ಇಬ್ಬರೂ ನಟಿಸುವುದು ಖಚಿತವಾಗಿದೆ ಎಂದು ರವಿವರ್ಮ ತಿಳಿಸಿದ್ದಾರೆ. ಆದರೆ ಚಿತ್ರವನ್ನು ತೆಲುಗು ಹಾಗೂ ಹಿಂದಿಯಲ್ಲಿ ಯಾರು ನಿರ್ದೇಶಿಸುತ್ತಿದ್ದಾರೆ ಹಾಗೂ ನಾಯಕಿಯರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಒಟ್ಟಿನಲ್ಲಿ ನಾಣಿ ಹಾಗೂ ಆಯುಷ್ಮಾನ್ ಖುರಾನ ರಿಷಭ್ ಶೆಟ್ಟಿಯ ಬೆಲ್ ಬಾಟಮ್ ತೊಡಲು ರೆಡಿಯಾಗಿದ್ದಾರೆ.