ಕರ್ನಾಟಕ

karnataka

ETV Bharat / sitara

ಹರಿಪ್ರಿಯ ನೀರು ಉಗಿದದ್ದು ಎಷ್ಟು ಸಾರಿ?: ಸಖತಾಗಿದೆ ಬೆಲ್​ಬಾಟಮ್​ ಮೇಕಿಂಗ್​ ವಿಡಿಯೊ - undefined

ಜಯತೀರ್ಥ ನಿರ್ದೇಶನದ ಬೆಲ್​ ಬಾಟಂ ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಚಿತ್ರದ ಮೂಲಕ ನಿರ್ದೇಶಕ ರಿಷಭ್ ಶೆಟ್ಟಿ ಫುಲ್ ಪ್ಲೆಡ್ಜ್​​ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ 14 ವರ್ಷಗಳ ನಂತರ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ.

ಏತಕೆ ಸಾಂಗ್ ಮೇಕಿಂಗ್ ವಿಡಿಯೋ

By

Published : Mar 13, 2019, 1:54 PM IST

Updated : Mar 13, 2019, 3:04 PM IST

ನಟ, ನಿರ್ದೇಶಕ ರಿಷಭ್​​ ಶೆಟ್ಟಿ ಹಾಗೂ ಚಿಕ್ಕಮಗಳೂರಿನ ಚೆಲುವೆ ಹರಿಪ್ರಿಯಾ ಅಭಿನಯದ 'ಬೆಲ್ ಬಾಟಂ' ಚಿತ್ರ ಅಮೋಘ ನಾಲ್ಕನೇ ವಾರ ಪ್ರದರ್ಶನ ಕಾಣುತ್ತಿದೆ.

ಚಿತ್ರದಲ್ಲಿ 80ರ ದಶಕದ ರೆಟ್ರೋ ಲುಕ್​​ನಲ್ಲಿ ರಿಷಭ್​​-ಹರಿಪ್ರಿಯಾ ಮಿಂಚಿದ್ದಾರೆ. ಇವರಿಬ್ಬರ ಆನ್​ ಸ್ಕ್ರೀನ್​​ ಕೆಮಿಸ್ಟ್ರಿ ಸಖತ್ತಾಗಿ ವರ್ಕ್ಔಟ್ ಆಗಿದೆ. ಅದರಲ್ಲೂ ಇವರಿಬ್ಬರ ಕಾಂಬಿನೇಷನ್​​​ನ ಏತಕೆ ಬೊಗಸೆ ತುಂಬಾ ಆಸೆ ನೀಡುವೇ ಸಾಂಗಂತೂ ಎಲ್ಲರ ಮನಸೂರೆಗೊಂಡಿದೆ. ಈ ಹಾಡಿನಲ್ಲಿ ರಿಷಭ್​​ ಹಾಗೂ ಹರಿಪ್ರಿಯಾ ಕಣ್ಸನ್ನೆಗಳು ಕ್ಲಿಕ್ ಆಗಿವೆ. ಸದ್ಯ ಚಿತ್ರತಂಡ ಈ ಹಾಡಿನ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿದೆ. ರಿಷಭ್ ಮತ್ತು ಹರಿಪ್ರಿಯಾ ಸಖತ್ ತರಲೇಯಾಗಿ,ಲವಲವಿಕೆಯಿಂದ ಶೂಟಿಂಗ್ ಪೂರೈಸಿರುವುದು ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.

ಅಜನೀಶ್ ಲೋಕನಾಥ್ ಟ್ಯೂನಿಗೆ ವಿಕಟ ಕವಿ ಯೋಗರಾಜ್ ಭಟ್ ಪದಗಳ ಪೋಣಿಸಿದ್ರೆ, ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಈ ಹಾಡಿನ ಚಿತ್ರೀಕರಣ ಶಿವಮೊಗದಲ್ಲಿ ನಡೆದಿದೆ.

Last Updated : Mar 13, 2019, 3:04 PM IST

For All Latest Updates

TAGGED:

ABOUT THE AUTHOR

...view details