ನಟ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ ಅಭಿನಯದ ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಸಿನಿಮಾ ಯಶಸ್ವಿ 125 ದಿನಗಳನ್ನು ಪೂರೈಸಿದೆ. ಫೆಬ್ರವರಿ 15ರಂದು ಬಿಡುಗಡೆಯಾಗಿದ್ದ, ಈ ಚಿತ್ರ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡಕ್ಕೆ ಫುಲ್ ಖುಷಿ ಆಗಿದೆ.
125 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಚಿತ್ರ ತಂಡ ಚಿತ್ರಕ್ಕೆ ತೆರೆ ಹಿಂದೆ ಹಾಗೂ ಮುಂದೆ ದುಡಿದವರಿಗೆ 125ನೇ ದಿನದ ನೆನಪಿನ ಕಾಣಿಕೆಯನ್ನು ಕೊಡುವ ಮೂಲಕ ಗೌರವಿಸಿತು. ನಗರದ ಖಾಸಗಿ ಕ್ಲಬ್ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮಕ್ಕೆ ಕಾಮಿಡಿ ಕಿಂಗ್ ಶರಣ್ ಹಾಗೂ ಬಹುಭಾಷಾ ನಟ, ಕನ್ನಡಿಗ ಕಿಶೋರ್ ಆಗಮಿಸಿ ಚಿತ್ರದಲ್ಲಿ ದುಡಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.